ಶಹಾಪುರ ವಾರ್ಡ್ 21 : ಒಗ್ಗನವರ ಕಾಲೋನಿ : ಗಿಡಗಂಟೆಗಳಿಂದ ಮುಚ್ಚಿದ ರಸ್ತೆ | ಗಬ್ಬುನಾರುತ್ತಿರುವ ಚರಂಡಿ ನೀರು | ಸಾಂಕ್ರಾಮಿಕ ರೋಗದ ಭೀತಿ | ಕಣ್ಣಾಯಿಸದ ಜನಪ್ರತಿನಿಧಿಗಳು

ಬಸವರಾಜ ಕರೇಗಾರ

ಶಹಾಪುರ:ನಗರದ ರಾಖಂಗೇರಾದ ರಾಜ್ಯ ಹೆದ್ದಾರಿಯಲ್ಲಿರುವ ಹೊಸ ಸುಭೇದಾರ ಆಸ್ಪತ್ರೆಯ ಹಿಂದುಗಡೆಯ ವಾರ್ಡ್ ನಂಬರ್ 21 ರ ಒಗ್ಗನವರ ಕಾಲೋನಿಯಲ್ಲಿರುವ ಸಿಸಿ ರಸ್ತೆ ಕೇವಲ ಒಂದೇ ವರ್ಷದಲ್ಲಿ ರಸ್ತೆಯ ಮೇಲೆ ಬಿಳಚಿ ಕಲ್ಲುಗಳು ಹೊರಬಂದಿದ್ದು,ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಡಾಂಬರೀಕರಣವಾಗದ ಮತ್ತು ಕಳಪೆ ಕಾಮಗಾರಿಯಿಂದ ಕುಡಿದ ಸಿಸಿ ರಸ್ತೆ.

ರಸ್ತೆಯ ನಿರ್ಮಾಣದ ಜೊತೆಗೆ ಚರಂಡಿ ನಿರ್ಮಿಸಬೇಕಿತ್ತು.ಆದರೆ ಚರಂಡಿ ನಿರ್ಮಿಸದೆಯೇ ಸಿಸಿ ರಸ್ತೆ ನಿರ್ಮಿಸಿದ್ದರಿಂದ,ರಸ್ತೆಯ ಎರಡು ಕಡೆಯ ಮನೆಗಳಲ್ಲಿ ಬರುವ ಬಳಕೆ ನೀರು ಖಾಲಿ ಜಾಗದಲ್ಲಿ ಬಿಡುತ್ತಿದ್ದು,ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.ಇನ್ನು ರಸ್ತೆಯ ಎರಡು ಕಡೆ ಅವರವರ ಸ್ಥಳಗಳಲ್ಲಿ ಮನೆಗಳು ನಿರ್ಮಾಣವಾಗುತ್ತಿರುವುದರಿಂದ ಖಾಲಿ ಇರುವ ಸ್ಥಳದಲ್ಲಿ ಬಳಕೆ ನೀರು ಬಿಡುವುದರಿಂದ ಬಹಳ ದಿನಗಳವರೆಗೆ ನಿಂತು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.ಸಿಸಿ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಚರಂಡಿಯನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರ ಆರೋಪವಾಗಿದೆ.

ರಸ್ತೆಯ ಎರಡೂ ಮಗ್ಗುಲುಗಳಲ್ಲಿ ಜಾಲಿಯ ಮುಳ್ಳುಗಳು ಆವರಿಸಿಕೊಂಡಿರುವುದರಿಂದ ಅಲ್ಲಿಯೆ ಮಲಮೂತ್ರ ಮಾಡುವುದರಿಂದ ಮಲಮೂತ್ರ ಸ್ಥಳವಾಗಿ ಮಾರ್ಪಟ್ಟಿದೆ.ಇದರಿಂದ ವಿಷಪೂರಿತ ಜಂತುನಾಶಕಗಳು ಓಡಾಡುತ್ತಿದ್ದು ರಾತ್ರಿಯಲ್ಲಿ ಓಡಾಡಲು ಭಯವಾಗುತ್ತಿದೆ. ಕೆಲವು ಕಡೆ ಮನೆಯವರ ಆಕ್ಷೇಪಣೆಯಿಂದ ಸಿಸಿ ರಸ್ತೆಯನ್ನು ಮಾಡದೆ ಬಿಳಚಿ ಕಲ್ಲುಗಳನ್ನು ಹಾಕಿ ರಸ್ತೆಯ ಮೇಲೆ ಸಿಮೆಂಟ್ ಕಂಕರ್ ಹಾಕದೆ ಹಾಗೆಯೇ ಬಿಡಲಾಗಿದೆ.ಇದರ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.ಕಳಪೆ ಕಾಮಗಾರಿಯನ್ನು ಮಾಡಿದ ಗುತ್ತಿಗೆದಾರರು ಹಾಗೆಯೇ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಇದರ ಬಗ್ಗೆ ಗಂಭೀರವಾದ ತನಿಖೆ ನಡೆಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಗಿಡಗಂಟೆಗಳಿಂದ ಆವರಿಸಿದ ಮತ್ತು ಮಲಮೂತ್ರದ ತಾಣವಾದ ರಸ್ತೆಯ ಎರಡು ಇಕ್ಕೆಲಗಳು.

 ಜನಪ್ರತಿನಿಧಿಗಳು ಮತ್ತು ನಗರಸಭೆಯ ಅಧಿಕಾರಿಗಳು ವಾರ್ಡ್ ನಂಬರ್ 12  ಕಡೆಗೆ ಕಣ್ಣು ಹಾಯಿಸದೇ ಇರುವುದು ಒಂದುಕಡೆಯಾದರೆ,ರಾಜಕಾರಣಿಗಳು ಮತ್ತು ನಗರಸಭೆಯ ಅಧಿಕಾರಿಗಳು ಇಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ಕೇಳುತ್ತಿಲ್ಲ.ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಪರಿಹರಿಸುವರೊ ಕಾಯ್ದು ನೋಡಬೇಕಿದೆ.

 

 

About The Author