2021-22 ಸಾಲಿನ ಜಮಾ ಆಗದ ರೈತರ ಸಾಲದ ಹಣ

ಶಹಾಪುರ:ವಡಗೇರಾ ಪಟ್ಟಣದ ಪ್ರಾಥಮಿಕ ಸಹಕಾರಿ ಸಂಘಕ್ಕೆ ಮತ್ತು ತಾಲ್ಲೂಕಿನ ಕೆಲ ಗ್ರಾಮಗಳ ಸಹಕಾರಿ ಸಂಘಗಳಲ್ಲಿ ಸಾಲಕ್ಕೆ ಆಯ್ಕೆ ಯಾದ  ರೈತ ಫಲಾನುಭವಿಗಳಿಗೆ  2021-22 ರ ಸಾಲಿನ ರೈತರ ಸಾಲದ ಹಣ ಜಮೆ ಆಗದ ಕಾರಣ ಕಲಬುರಗಿ ಯಾದಗಿರಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಸುರೇಶ ಸಜ್ಜನ್ ರವರೆಗೆ ರಾಜ್ಯ ರೈತ ಸಂಘ ಜಿಲ್ಲಾ ಘಟಕ ವತಿಯಿಂದ ಮನವಿ ಸಲ್ಲಿಸಿಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಸಜ್ಜನ್ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಹಣ ಬಿಡುಗಡೆಗೊಳಿಸಿ ಎಲ್ಲ ರೈತರ ಖಾತೆಗೆ ಶೀಘ್ರವೇ ಹಣ ಜಮಾ ಮಾಡುವುದಾಗಿ ತಿಳಿಸಿದರು. .ಈಗಾಗಲೇ ಹಣ ಬಿಡುಗಡೆ ಗೊಳಿಸಿದ್ದರೆ ರೈತರಿಗೆ ಬೀಜ ಗೊಬ್ಬರ ಖರೀದಿಗೆ ಅನುಕೂಲವಾಗುತ್ತಿತ್ತು. ಇನ್ನೂ   ವಿಳಂಬ ಮಾಡಿದರೆ ರಾಜ್ಯ ರೈತ ಸಂಘದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಬಾಗುರ ತಿಳಿಸಿದರು .ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಜಡಿ .ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮಲ್ಲಣ್ಣ ನೀಲಹಳ್ಳಿ .ಮಲ್ಕಣ್ಣ ಚಿಂತಿ .ಫಕೀರಹಮ್ಮದ ಮರಡಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *