ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ–ಬಸವರಾಜ್ ಕೊಪ್ಪರ್

ರಾಯಚೂರು:ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಇದರಿಂದ ಉಜ್ವಲ ಭವಿಷ್ಯ ಹೊಂದಲು ನಾಂದಿಯಾಗುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಬಸವರಾಜ್ ಕೊಪ್ಪರ ರವರು ಇಂದು ಗ್ರಾಮದ ಸರ್ಕಾರಿ ಪ್ರೌಢಶಾಲಾ ಎಸ್ ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಸ್ತು, ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸುಗಳಿಸಲು ಆತ್ಮವಿಶ್ವಾಸ ಬಹಳ ಪ್ರಾಮುಖ್ಯವೆಂದು ತಿಳಿಸಿದರು ಕೆಲವು ನಿದರ್ಶನಗಳ ಮೂಲಕ ವಿದ್ಯಾರ್ಥಿಗಳ ಜೀವನದ ಕೆಲವೊಂದು ಅನುಭವದ ಘಟನೆಗಳನ್ನು ವಿವರಿಸಿ ಶುಭನುಡಿಗಳನ್ನಾಡಿದರು.ಮುಖ್ಯವಾಗಿ ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ಬೀಳ್ಕೊಡುವ ಸಮಾರಂಭ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ತಮ್ಮಣ್ಣ ಗೌಡ ರವರು ವಹಿಸಿದ್ದರು ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಕಟ್ಯಾಚಾರ್ಯ ಅರ್ಚಕರು,ಶರಣಪ್ಪ ಗೌಡ ಮಾಲಿ ಪಾಟೀಲ್,ಎಸ್ ಡಿ ಎಮ್ ಅಧ್ಯಕ್ಷರಾದ ಶಿವರಾಜ್ ಕಲ್ಮಲ್, ನಿವೃತ್ತ ಪಿ.ಎಸ್.ಐ ಎಚ್. ಎಸ್.ಪಟೇದ್, ರಾಮನಗೌಡ ಯಾಟಗಲ್, ಶಿಕ್ಷಕರಾದ ಕಲ್ಲನಗೌಡ, ಮಲ್ಲಿಕಾರ್ಜುನ, ರಮೇಶ್ ಕಟ್ಟಿಮನಿ, ರಾಮಕೃಷ್ಣ, ಧನಂಜಯ, ನರಸಪ್ಪ ಛಲವಾದಿ,ಆರ್.ಯಾದವ ಶಿಕ್ಷಕಿಯರಾದ ಶ್ರೀಮತಿ ಅಶ್ವಿನಿ, ಶ್ರೀ ಮತಿ ಗುರುದೇವಿ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author