ಅಭಿವೃದ್ಧಿಯಲ್ಲಿ ಶಹಪುರ ಕ್ಷೇತ್ರ ಮೊದಲ ಸ್ಥಾನದಲ್ಲಿದೆ  

ಶಹಪುರ:ಶೈಕ್ಷಣಿಕ,ಆರೋಗ್ಯ ಮತ್ತು ಇತರ ವಲಯಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿಯೆ ಶಹಾಪುರ ಕ್ಷೇತ್ರ ಮೊದಲ ಸ್ಥಾನದಲ್ಲಿದೆ ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.ಇಂದು ನಗರದ 12 ನೇ ವಾರ್ಡಿನಲ್ಲಿ SDP ಯೋಜನೆ ಅಡಿಯಲ್ಲಿ18 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.ಶೈಕ್ಷಣಿಕವಾಗಿ ಪದವಿ ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ,ಮಾಡರ್ನ್ ಡಿಗ್ರಿ ಕಾಲೇಜು ಸ್ಥಾಪನೆ,ನಗರದಲ್ಲಿ ಸಾಮೂಹಿಕ ಶೌಚಾಲಯ,ಮುಖ್ಯರಸ್ತೆ,ಸಿಸಿ ರಸ್ತೆ,ಶುದ್ಧಕುಡಿಯುವ ನೀರಿನ ಸಮಸ್ಯೆಗಳು, ಬಡವರಿಗೆ ನಿವೇಶನ ರಹಿತರಿಗೆ ನಿವೇಶನ ಮತ್ತು ಆಶ್ರಯ ಮನೆಗಳನ್ನು ಒದಗಿಸಿ ಕೊಡಲಾಗಿದೆ ಎಂದು ತಿಳಿಸಿದರು. 

ನಗರಸಭೆ ಅಧ್ಯಕ್ಷರಾದ ಚಂದ್ರಶೇಖರ ಲಿಂಗದಳ್ಳಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಆರಭೋಳ,ಮುಖಂಡರಾದ ನಿಂಗಪ್ಪ ನಾಯ್ಕೋಡಿ,ಮಹಾದೇವಪ್ಪ ಸಾಲಿಮನಿ,ಮುಸ್ತಫಾ ದರ್ಭಾನ್,ಪೌರಾಯುಕ್ತರಾದ ಓಂಕಾರ ಪೂಜಾರಿ,ಶಿಶು ಅಭಿವೃದ್ಧಿ ಮಂಡಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಳಾದ ಗುರುರಾಜ,ನಗರಸಭೆ ಸದಸ್ಯರಾದ ಸಿದ್ದಪ್ಪ ಆರಭೋಳ,ಶಾಂತಪ್ಪ ಕಟ್ಟಿಮನಿ,ಬಸವರಾಜ ಚನ್ನೂರು ಸೇರಿದಂತೆ ಇತರರು ಇದ್ದರು

 ನಾಲ್ಕು ವರ್ಷದಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳು

* ನಗರದಲ್ಲಿ 8 ರಿಂದ 10 ಸಾಮೂಹಿಕ ಶೌಚಾಲಯಗಳ ನಿರ್ಮಾಣ,

* ವಾರ್ಡ್ ನಂಬರ್ 12 ರಲ್ಲಿ 18 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ 

* ನಗರೋತ್ಥಾನದಡಿಯಲ್ಲಿ 16 ಕೋಟಿ ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ಪ್ರಾರಂಭ

* 70 ಕೋಟಿ ಅನುದಾನಕ್ಕಾಗಿ ನೀರು ಸರಬರಾಜು ಮಂಡಳಿಗೆ ಪ್ರಸ್ತಾವನೆ ಸಲ್ಲಿಕೆ

* ನಗರದಲ್ಲಿ 6 ಶುದ್ಧ ಕುಡಿಯುವ ನೀರಿನ ಘಟಕಗಳು ಪೂರ್ಣ

* ಶುದ್ಧ ಕುಡಿಯುವ ನೀರಿಗಾಗಿ ಸನ್ನತಿ ಸೇತುವೆಯಿಂದ  ಶಹಪುರ ನಗರಕ್ಕೆ 70 ಕೋ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

* 1 ಕೋಟಿ ವೆಚ್ಚದಲ್ಲಿ ಬಸವೇಶ್ವರ ಚೌಕದಿಂದ ಮಚ್ಚಿಕೆರೆ ಗಡ್ಡೆಯ ಮುಖಾಂತರ ಕನ್ಯಾಕೋಳೂರು ಅಗಸೆಯವರೆಗೆ        ರಸ್ತೆಯ ಡಾಂಬರೀಕರಣ

 

ನಗರದ ಪ್ರಮುಖ ರಸ್ತೆ ಸೇರಿದಂತೆ ಸೇತುವೆಗಳ ನಿರ್ಮಾಣ

* KEB ಯಲ್ಲಿನ ಮುಖ್ಯರಸ್ತೆಯಲ್ಲಿನ ಸೇತುವೆ,ಕಲ್ಬುರ್ಗಿ ಟವರ್ ಪಕ್ಕದಿಂದ ಗಣೇಶ್ ನಗರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿನ ಸೇತುವೆ,ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಹೋಗುವ ಸೇತುವೆ,ನಗರದ  ಸಂಗಮೇಶ್ವರ ಶಾಲೆಗೆ ಹೋಗುವ ಸೇತುವೆ

* 1.50 ಕೊ. ವೆಚ್ಚದಲ್ಲಿ ಹಾಲಭಾವಿಗೆ ಹೋಗುವ ರಸ್ತೆಯಲ್ಲಿ ಸೇತುವೆಯ ನಿರ್ಮಾಣ

* ರಾಜ್ಯ ಸರಕಾರದಿಂದ ವಿಶೇಷ ಅನುದಾನದಡಿಯಲ್ಲಿ ಶಹಪುರ ಕ್ಷೇತ್ರಕ್ಕೆ 5 ಕೋಟಿ ಅನುದಾನ

* ನಗರದಲ್ಲಿನ ಸಿಸಿ ರಸ್ತೆ, ಇತರ ಮೂಲಭೂತ ಸೌಕರ್ಯಕ್ಕಾಗಿ ಕೆಕೆಆರ್ಡಿಬಿಯಿಂದ 5.68 ಕೊ.ಮಂಜೂರು

* 6.5 ಕೋಟಿ ಅನುದಾನದಲ್ಲಿ ಪದವಿ ಕಾಲೇಜಿನಲ್ಲಿ ಹೊರ ಕ್ರೀಡಾಂಗಣ ನಿರ್ಮಾಣ. ಕ್ರೀಡಾಂಗಣದಲ್ಲಿ ನೆರಳಿನ                                                          ವ್ಯವಸ್ಥೆ

* 2.5 ಕೋಟಿ ವೆಚ್ಚದಲ್ಲಿ ಒಳ ಕ್ರೀಡಾಂಗಣ ನಿರ್ಮಾಣ

* 80 ಲಕ್ಷ ರೂ. ವೆಚ್ಚದಲ್ಲಿ 700 ಮೀಟರ್ ವಾಕಿಂಗ್ ಪಾರ್ಕ್ ನಿರ್ಮಾಣ.

 

About The Author