ಭೂಗಳ್ಳರ ಹಾವಳಿಗೆ ಕರಗುತ್ತಿವೆ ಕೆರೆಯ ಕೋಡಿಗಳು

ಶಹಾಪುರ : ತಾಲ್ಲೂಕಿನ ಮಹಲರೋಜಾ ಸೀಮಾಂತರದ ನಮ್ಮ ಜಮೀನಿನ ಹತ್ತಿರ ಸುಮಾರು ನೂರಾರು ವರ್ಷಗಳ ಹಿಂದೆ ಕೆರೆಯ ಕೋಡಿ ನಿರ್ಮಾಣ ಮಾಡಲಾಗಿದೆ. ಆದರೆ ಸದ್ಯಕ್ಕೆ ಭೂಗಳ್ಳರು ಕೆರೆ ಮಣ್ಣನ್ನು ರಾತ್ರೋರಾತ್ರಿ ಕದ್ದೊಯ್ಯುತ್ತಿದ್ದಾರೆ.ಇದರಿಂದ ಸರ್ಕಾರದ ಆಸ್ತಿಗೆ ಧಕ್ಕೆಯಾಗುತ್ತಿದೆ

ಇದನ್ನು ಕೂಡಲೇ ತಡೆಹಿಡಿಯಬೇಕು
ಎಂದು ಗ್ರಾಮದ ಯುವಕ ಹಣಮಂತ ನಗನೂರು ಮನವಿ ಮಾಡಿಕೊಂಡಿದ್ದಾರೆ.

ಯಾವುದೇ ರೀತಿಯ ಪರವಾನಿಗೆ ಇಲ್ಲದೆ ಕೆರೆ ಕಟ್ಟೆ ಬೆಟ್ಟಗುಡ್ಡಗಳ ಸಮೃದ್ಧವಾದ ಮಣ್ಣನ್ನು ಎಗ್ಗಿಲ್ಲದೆ ಪ್ರತಿನಿತ್ಯ ನೂರಾರು ಲೋಡ್ ಹಣದಾಸೆಗಾಗಿ ಸಾಗಿಸುತ್ತಿದ್ದಾರೆ. ಭೂಗಳ್ಳರ ಹಾವಳಿ ಯಿಂದಾಗಿ ರಾತ್ರೋರಾತ್ರಿ ಕೆರೆಕೋಡಿ ಬೆಟ್ಟಗುಡ್ಡಗಳು ಕರಗುತ್ತಿವೆ.ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಮಣ್ಣನ್ನು ಸಂರಕ್ಷಣೆ ಮಾಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಗ್ರಾಮದ ಸುತ್ತಮುತ್ತಲು ಕೂಡ ಇದೆ ರೀತಿಯ ಕೆಲವೊಂದು ಮುಖಂಡರು ವ್ಯವಹಾರ ನಡೆಸಿದ್ದಾರೆ.ಸರ್ಕಾರದ ಮಣ್ಣನ್ನು ಕಬಳಿಸುವ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.ಕಂದಾಯ ಇಲಾಖೆ ಅಧಿಕಾರಿಗಳ ಹಾಗೂ ಗ್ರಾಪಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಅಮೂಲ್ಯವಾದ ಕೆರೆಯ ಮಣ್ಣನ್ನು ಖಾಲಿಯಾಗುತ್ತಿದೆ ಆದ್ದರಿಂದ ಬೇಗನೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಳ್ಳಬೇಕಾಗಿದೆ.

About The Author