94ರ ಹರೆಯದಲ್ಲೂ ಆರೋಗ್ಯವಂತ ಬದುಕು; ಡಾ. ಗುರುಲಿಂಗಯ್ಯ ಸ್ವಾಮಿ ಹಿರೇಮಠ ಜನ್ಮದಿನ ಸಂಭ್ರಮ

ಶಹಾಪುರ,
ನಗರದ ಹಿರಿಯ ವೈದ್ಯರಾದ ಡಾ. ಗುರುಲಿಂಗಯ್ಯ ಸ್ವಾಮಿ ಹಿರೇಮಠ ಅವರ 94ನೇ ಜನ್ಮದಿನವನ್ನು ನಗರದ ವಾಕಿಂಗ್ ಬಳಗದ ಸದಸ್ಯರು ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು.ಡಾ. ಹಿರೇಮಠ ಅವರ ತೋಟದ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳಗದ ಸದಸ್ಯರು ಶಾಲು ಹೊದಿಸಿ, ಹೂವಿನ ಹಾರ ಹಾಗೂ ಹೂಗುಚ್ಛ ನೀಡಿ ಜನ್ಮದಿನದ ಶುಭಾಶಯ ಕೋರಿದರು. ಪಟಾಕಿ ಸಿಡಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು. ಬಳಿಕ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ವಾಕಿಂಗ್ ಬಳಗದ ಸದಸ್ಯರಾದ ರಾಚಯ್ಯ ಸ್ವಾಮಿ ಹಿರೇಮಠ ಹಾಗೂ ಶಿಕ್ಷಕ ಭೀಮನಗೌಡ, “94ನೇ ವಯಸ್ಸಿನಲ್ಲೂ ಡಾ. ಹಿರೇಮಠ ಅವರು ಸ್ವತಃ ಕಾರು ಚಲಾಯಿಸಿಕೊಂಡು ಬರುವುದು ಅವರ ಸದೃಢ ಆರೋಗ್ಯಕ್ಕೆ ಸಾಕ್ಷಿಯಾಗಿದೆ. ನಿತ್ಯ ವಾಕಿಂಗ್, ಯೋಗ ಹಾಗೂ ಶಿಸ್ತುಬದ್ಧ ಜೀವನಶೈಲಿಯೇ ಅವರ ಆರೋಗ್ಯದ ಗುಟ್ಟಾಗಿದೆ. ಅವರ ಬದುಕು ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಇನ್ನೂ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ದೊರೆಯಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಗಂಧದಮಠ, ಜಗದೀಶ ಹೊನ್ಕಲ್, ಶರಣಗೌಡ ಕಟ್ಟಿಮನಿ, ರುದ್ರಗೌಡ ದರ್ಶನಾಪುರ, ವಸಂತಕುಮಾರ ದಂಡು, ಅಮರಯ್ಯ ಹಿರೇಮಠ (ದಿಗ್ಗಿ), ಬಸವರಾಜ ಚೌದ್ರಿ, ಶಕೀಲ್ ಮುಲ್ಲಾ, ಉಮೇಶ ಬಾಗೇವಾಡಿ, ರಾಜು ಪತ್ತಾರ, ಶಿವಕುಮಾರ ಕನ್ಯಾಕೋಳೂರ, ಹಿರೇಮಠ ಶಿವು ಮುತ್ಯಾ ಸೇರಿದಂತೆ ವಾಕಿಂಗ್ ಬಳಗದ ನೂರಾರು ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *