AEE ಶೇಖ್ ಮೋಹಿಯುದ್ದಿನ್ ಖತೀಬ್ ಅವರಿಗೆ ಸನ್ಮಾನ

ಶಹಾಪುರ: ಲೋಕೋಪಯೋಗಿ ಇಲಾಖೆ ಶಹಾಪುರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ (AEE) ಅಧಿಕಾರ ಸ್ವೀಕರಿಸಿದ ಶೇಖ್ ಮೋಹಿಯುದ್ದಿನ್ ಖತೀಬ್ ಅವರನ್ನು ಕುರುಬ ಸಮುದಾಯದ ಪ್ರಭಾವಿ ನಾಯಕ ಹಾಗೂ ಯುವಕರ ನೆಚ್ಚಿನ ಭೀಮಣ್ಣ ಚಿಟ್ಟೆನವರ, ಪ್ರಥಮ ದರ್ಜೆ ಗುತ್ತಿಗೆದಾರ ಮಾಳಪ್ಪ ಗಂಗನಾಳ ಹಾಗೂ ಯುವ ನಾಯಕರಾದ ಬಸ್ಸುಹಳ್ಳಿ ಸಗರ, ನಾಗಪ್ಪ ನಾಯ್ಕೋಡಿ, ಚಂದ್ರಶೇಖರ ಸಿಂಗನಳ್ಳಿ ಸೇರಿದಂತೆ ಹಲವರು ಸನ್ಮಾನಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಶೇಖ್ ಮೋಹಿಯುದ್ದಿನ್ ಖತೀಬ್ ಅವರಿಗೆ ಶುಭಾಶಯಗಳನ್ನು ಸಲ್ಲಿಸಿ, ಶಹಾಪುರ ಉಪವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಸಿದರು.

Leave a Reply

Your email address will not be published. Required fields are marked *