ಶಿಕ್ಷಣತಜ್ಞ ಸಾಮಾಜಿಕ ಕಾನೂನುಗಳ ಹರಿಕಾರ ನಾಲ್ವಡಿ ಕೃಷ್ಣರಾಜ

ಶಹಾಪುರ:  ಶಿಕ್ಷಣತಜ್ಞ ಸಾಮಾಜಿಕ ಕಾನೂನುಗಳ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿ ಸಮರ್ಥ ಆಡಳಿತಗಾರರೆನಿಸಿದ್ದರು ಎಂದು ಶಿಕ್ಷಣ ಸಂಪನ್ಮೂಲ ವ್ಯಕ್ತಿ ವೀರಭದ್ರಯ್ಯ ತಿಳಿಸಿದರು.ನಗರಗಳ ಹಳಪೇಟೆಯ ಜ್ಞಾನಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತೋತ್ಸವ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ವರಿಗೂ ಕಡ್ಡಾಯ ಶಿಕ್ಷಣ ಸೇರಿದಂತೆ ಮೀಸಲಾತಿ ಪದ್ದತಿ, ಗ್ರಾಮೀಣ ಪ್ರದೇಶದ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ, ಕನ್ನಡ ಸಾಹಿತ್ಯ ಪರಿಷತ್ ಆರಂಭ, ಹೊಸ ರೈಲು ದಾರಿಗಳ ನಿರ್ಮಾಣ, ನೀರಾವರಿ ಯೋಜನೆಗಳಿಗೆ  ಪ್ರೋತ್ಸಾಹ  ನೀಡಿದ ಕೀರ್ತಿ ನಾಲ್ವಡಿ ಕೃಷ್ಣರಾಜರಿಗೆ ಸಲ್ಲುತ್ತದೆ.

ವಿದ್ಯಾರ್ಥಿಗಳು ಹಿರಿಯರು ದಾರ್ಶನಿಕರು ನಾಡಿಗೆ ನೀಡಿದ ಕೊಡುಗೆ ಅರಿತುಕೊಳ್ಳಬೇಕು, ಗುರುಗಳು ಮಾರ್ಗದರ್ಶನದಲ್ಲಿ ಶಿಸ್ತು, ಸಂಯಮ ಪಾಠ ಕಲಿತು ಶ್ರೇಷ್ಠ ನಾಗರಿಕರಾಗಬೇಕು ಎಂದರು. ಈ ಸಂದರ್ಭದಲ್ಲಿ ನೂತನವಾಗಿ ಸಿಆರ್‍ಪಿ ಜವಾಬ್ದಾರಿ ವಹಿಸಿಕೊಂಡ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಶಿಕ್ಷಕ ಶಿವರೆಡ್ಡಿ ಸೇರಿದಂತೆ ಸಮಸ್ತ ಶಿಕ್ಷಕಯರು, ವಿದ್ಯಾರ್ಥಿಗಳು ಇದ್ದರು.

About The Author