ಯಾದಗಿರಿ:ಕಳ್ಳರ ಹಾವಳಿ ಎಚ್ಚರಿಕೆಯಿಂದಿರಲು SP ಸೂಚನೆ

ಯಾದಗಿರಿ: ರವಿವಾರ ದಿ. 05/06/2022 ರಂದು ರಾತ್ರಿ ಸಮಯದಲ್ಲಿ, ಕಳ್ಳರು ಯಾದಗಿರಿಯ ಮಾತಾ ಮಾಣಿಕೇಶ್ವರಿ ನಗರದಲ್ಲಿರುವ ರಾಮನಗೌಡ ನಗನೂರು ಎಂಬುವವರ ಮನೆಯ ಬೀಗವನ್ನು ಮುರಿದು, ಮನೆಯಲ್ಲಿದ್ದ 74.8 ಗ್ರಾಂ ಚಿನ್ನದ ಆಭರಣಗಳನ್ನು ಮತ್ತು 3 ಲಕ್ಷ ನಗದು ಹಣ ಕಳ್ಳತನವಾಗಿದ್ದು,ಬಗ್ಗೆ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆ ಕುರಿತು ತಂಡ ರಚಿಸಲಾಗಿದೆ ಎಂದು ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ.C.B.ವೇದಮೂರ್ತಿಯವರು ತಿಳಿಸಿದರು.

ಸಾರ್ವಜನಿಕರು ತಮ್ಮ ಬೆಲೆ ಬಾಳುವ ಸಾಮಾನುಗಳ ಮೇಲೆ ನಿಗಾ ಇರಿಸಿಕೊಳ್ಳತಕ್ಕದ್ದು.ಮನೆಗೆ ಬೀಗ ಹಾಕಿಕೊಂಡು ಮದುವೆ, ಸಮಾರಂಭ ಇತರೆ ಕೆಲಸಗಳಿಗೆ ಹೋಗುವ ಸಮಯದಲ್ಲಿ ಪೊಲೀಸ್ ಇಲಾಖೆಯ ಗೃಹ ಸುರಕ್ಷಾ app ಬಳಸಿ ಇಲಾಖೆಗೆ ಮಾಹಿತಿ ನೀಡತಕ್ಕದ್ದು. ನಿಮ್ಮ ನಿಮ್ಮ ಏರಿಯಾಗಳಲ್ಲಿ ಯಾರಾದರೂ ಅಪರಿಚಿತರು ತಿರುಗಾಡುತ್ತಿದ್ದಲ್ಲಿ ಸಮೀಪದ ಠಾಣೆಗೆ ತಿಳಿಸತಕ್ಕದ್ದು ಎಂದು ಹೇಳಿದರು.

Leave a Reply

Your email address will not be published. Required fields are marked *