ಕಾಂಗ್ರೆಸ್ ಯುವ ಮುಖಂಡ ಶಾಂತು ಪಾಟೀಲ್, ಸುನೀಲ್ ರಾಥೋಡ್ ಮಾಹಿತಿ
* ಕಿಲಾರಿದೊಡ್ಡಿ (ಗಂಗನಾಳ)30 ಲಕ್ಷ ಸಿಸಿ ಕಾಮಗಾರಿಗೆ ಚಾಲನೆ* ಬಾಣತಿಹಾಳ 93 ಲಕ್ಷ ಸಿಸಿ ಕಾಮಗಾರಿ ವೀಕ್ಷಣೆ.

ಶಹಾಪುರ:
ಶಹಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸಲಾಗುವುದು ಹಾಗೂ ಎಲ್ಲ ಸಮುದಾಯದ ಜನರ ಸಮಸ್ಯೆಗಳಿಗೆ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಕ್ಕಾಗಿ ನೇರವಾಗಿ ನನ್ನ ಗಮನಕ್ಕೆ ತರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಹೇಳಿದರು.ತಾಲೂಕಿನ ಗಂಗನಾಳ ಕಿಲಾರಿ ದೊಡ್ಡಿಯಲ್ಲಿ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ 30 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದೆ. ಜನರ ಸಮಸ್ಯೆಗಳನ್ನು ಆಲಿಸಿದ ಸಚಿವರು ಗ್ರಾಮೀಣ ಪ್ರದೇಶಗಳಲ್ಲಿ ಸುಗಮ ಸಂಚಾರ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗಳು ಅವಶ್ಯಕ ಎಂದರು.
ಬಾಣತಿಹಾಳ ಗ್ರಾಮದಲ್ಲಿ 93 ಲಕ್ಷ ರೂ. ವೆಚ್ಚದ ಕೆಕೆಆರ್ಡಿಬಿ ಯೋಜನೆಯಡಿ ನಡೆಯುತ್ತಿರುವ ಸಿಸಿ ರಸ್ತೆ ಸೇರಿದಂತೆ ಹಲವು ಕಾಮಗಾರಿಗಳನ್ನು ಸಚಿವರು ವೀಕ್ಷಿಸಿದ ಅವರು ಗುಣಮಟ್ಟ ಕಾಮಗಾರಿಯನ್ನು ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವುಮಾಂತಪ್ಪ ಚಂದಾಪುರ ಸೇರಿದಂತೆ ಗ್ರಾಮದ ಮುಖಂಡರು ಸಾರ್ವಜನಿಕರು ಇದ್ದರು.
–_——————————————-
ಕರುನಾಡು ವಾಣಿ
ಡಿಜಿಟಲ್ ಮೀಡಿಯಾ
ಕರುನಾಡಿನ ಧ್ವನಿ, ಕರುನಾಡಿನ ಜನರಿಗಾಗಿ ಜನರೊಂದಿಗೆ. ಸುದ್ದಿ & ಜಾಹಿರಾತಿಗಾಗಿ ಸಂಪರ್ಕಿಸಿ :
karunaduvani.com@gmail.com 9060737896 – 9449438811