ಶಹಾಪೂರ,,
ಅಧಿಕಾರದ ಅಮಲಿನಲ್ಲಿರುವ ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕಾಲ ಬಂದಿದೆ. ನಾವು ಸದಾ ಜನರ ಸಂಕಷ್ಟಗಳಿಗೆ ಧ್ವನಿಯಾಗಿ ನಿಲ್ಲಲು ಸಿದ್ದವಿದ್ದೇವೆ. ಅಧಿಕಾರದಲ್ಲಿದ್ದವರೆ ಲೂಟಿಗೆ ನಿಂತರೆ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವವರು ಯಾರು? ಹೋರಾಟ ಮಾಡದ ಹೊರತು ಪರಿಹಾರ ದೊರಕದು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶಗೌಡ ಮುದ್ನಾಳ್ ಹೇಳಿದ್ದಾರೆ. ತಾಲೂಕಿನ ದೋರನಹಳ್ಳಿ ಗ್ರಾಮದ ಆದಿಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಯಾದಗಿರಿ ವಿಧಾನಸಭಾ ಮತಕ್ಷೇತ್ರದ ಕುಂದು ಕೊರತೆ, ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತು ಹಮ್ಮಿಕೊಂಡ ಬೃಹತ್ ಹೋರಾಟಕ್ಕಾಗಿ ದೋರನಹಳ್ಳಿ ಹೋಬಳಿ, ಹಯ್ಯಾಳ, ನಾಯ್ಕಲ್ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಸಮಸ್ಯೆಗಳ ಕುರಿತು ಕರೆಯಲಾಗಿದ್ದ ಮುಖಂಡರ, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಸಮಸ್ಯೆಗಳ ಕುರಿತು ಆಲಿಸಿ ಮಾತನಾಡಿದ ಅವರು ಜನಪ್ರತಿನಿಧಿಯಾದವರು ಅಭಿವೃದ್ಧಿ ಮಾಡುವ ಬದಲು ಅವರೇ ಲೂಟಿಗಿಳಿದರೆ ಮತಕ್ಷೇತ್ರದ ಜನರ ಕುಂದು ಕೊರತೆಗಳನ್ನು ಪರಿಹರಿಸುವವರು ಯಾರು. ನಾವು ಸದಾ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ದವಿದ್ದು ಈ ಕುರಿತು ಮತಕ್ಷೇತ್ರದಿಂದ ಹತ್ತು ಸಾವಿರ ಜನರನ್ನು ಸೇರಿಸಿ ಬೃಹತ್ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಕೈ ಜೋಡಿಸಿದರೆ ಅಧಿಕಾರಿಗಳನ್ನು ಎಚ್ಚರಿಸಲು ಸಾಧ್ಯ ಎಂದರೂ.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ ಮಾತನಾಡಿ ಸರ್ಕಾರ ಮತ್ತು ಅಧಿಕಾರಿಗಳ ಚರ್ಮ ದಪ್ಪವಿದೆ ಅವರಿಗೆ ಹೋರಾಟದ ಬಿಸಿ ಮುಟ್ಟಿಸದಿದ್ದರೆ ಜನರ ಸಮಸ್ಯೆಗಳಿಗೆ ಪರಿಹಾರ ಸಿಗದು. ಶಾಸಕರ ಪುತ್ರನೇ ಖುದ್ದಾಗಿ ಮರಳು ದಂದೆಗೆ ಇಳಿದಿದ್ದಾರೆ ಎಂದು ಅವರದೆ ಪಕ್ಷದ ಕಾರ್ಯಕರ್ತರು ಗೋಳಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂಧರ್ಬ ಪೂರ್ವಭಾವಿ ಸಭೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು, ಮುಖಂಡರಲ್ಲಿ ಗೊಲ್ಲಾಳಪ್ಪ ಗೋಲಗೇರಿ, ಸಾಯಬಣ್ಣ ಹಲಗಿ, ನಾಗಶೇಟ್ಟಿ ಸಾಹುಕಾರ, ಕಲ್ಲಪ್ಪ ಖಾನಾಪುರ, ಶಂಕ್ರಯ್ಯಸ್ವಾಮಿ, ಸಿದ್ದಣ್ಣ, ಇಂದ್ರಜೀತ್, ರಾಜು ಗುತ್ತೇದಾರ, ಮಲ್ಲರಡ್ಡಿ ದೊರೆ, ಸುರೇಶ ಸಾಹುಕಾರ, ಮಲ್ಲಿನಾಥ ಮಲಗೊಂಡ, ಸುರೇಶಗೌಡ ಎರಿಬಿಡಿ, ಸಿದ್ರಾಮರಡ್ಡಿ ಪಾಟೀಲ್, ಡಾ.ಬಸವರಾಜ, ಗೋವಿಂದ ಕೊಂಚೆಟ್ಟಿ, ರಾಮಲಿಂಗಪ್ಪ ಕೊಂಚೆಟ್ಟಿ, ರಂಗಪ್ಪ ನಾಯಕ್ ದೊರೆ, ಲಿಂಗರಾಜ ಸಾಹುಕಾರ, ವಾಲ್ಮೀಕಿ ನಾಯಕ, ಮೌನೇಶ, ಸಾಬಣ್ಣ ಗುಂಟನೂರ್, ಮಹಾಂತೇಶ ಮಲಗೊಂಡ ಹಲವು ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರು. ದೊಡ್ಡಪ್ಪ ದೇಸಾಯಿ, ಗೋವಿಂದಪ್ಪ ಕೊಂಚೆಟ್ಟಿ, ಕಲ್ಲಪ್ಪ ಖಾನಾಪುರ, ಮಂಜುನಾಥ ಕಂಚಗಾರ, ಭೀಮ ಆಂದೇಲಿ, ವೆಂಕಟೇಶ ಕಶೇಟ್ಟಿ, ರವಿಪಾಲ್ಕಿ ಸೇರಿದಂತೆ ಇತರರು ಇದ್ದರು.