ಶಹಾಪೂರ,,
ತಾಲೂಕಿನ ಮುಡಬುಳ ಗ್ರಾಮದಲ್ಲಿ ಬಯಲು ಶೌಚಾಲಯಕ್ಕೆ ಹೋಗುವ ದಾರಿಯನ್ನು ವ್ಯಕ್ತಿಯೊಬ್ಬ ಬಂದ್ ಮಾಡಿದ ಪರಿಣಾಮ ವಾರ್ಡ್ ನಂ.2 ರ ಮಹಿಳೆಯರು ಒಂದು ಕಡೆ ಸೇರಿ ಮಹಿಳೆಯರು ಜಮಾಗೊಂಡು ಗ್ರಾಮ ಪಂಚಾಯಿತಿಗೆ ಜಾಲಿ ಮುಳ್ಳು ಬಡಿದು ಪ್ರತಿಭಟನೆ ನಡೆಸಿದರು.
ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಜಾಗದಲ್ಲಿ ಹಲವು ವರ್ಷಗಳ ಹಿಂದೆ ಬಯಲು ಶೌಚಾಲಯ ನಿರ್ಮಿಸಲಾಗಿದೆ. ಗ್ರಾಮಸ್ಥರೊಬ್ಬರು ಬಯಲು ಶೌಚಾಲಯಕ್ಕೆ ಹೋಗುವ ದಾರಿಯನ್ನು ಬಂದ್ ಮಾಡಿದ್ದರು. ಬಯಲು ಶೌಚಾಲಯಕ್ಕೆ ಹೋಗುವ ದಾರಿಯನ್ನು ಪ್ರಾರಂಭಿಸುವಂತೆ ಮಹಿಳೆಯರು ಪ್ರತಿಭಟನೆ ನಡೆಸಿ ಮಾತನಾಡುತ್ತಾ, ಮುಡಬೂಳ ಗ್ರಾಮದಲ್ಲಿ ಬಯಲು ಶೌಚಾಲಯಕ್ಕೆ ಹೋಗುವ ದಾರಿಯನ್ನು ಕೂಡಲೇ ಪ್ರಾರಂಭಿಸಬೇಕು. ಅದಕ್ಕಾಗಿ ಗ್ರಾಮ ಪಂಚಾಯಿತಿಗೆ ಬೇಲಿ ಬಡಿದಿದ್ದೇವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮಕ್ಕೆ ದೌಡಾಹಿಸಿ ಪೊಲೀಸರ ಸಹಕಾರದೊಂದಿಗೆ ಒಂದು ವಾರದೊಳಗೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದ ನಂತರ ಮಹಿಳೆಯರು ಪ್ರತಿಭಟನೆಯನ್ನು ಕೈ ಬಿಟ್ಟರು.
ಒಂದು ವಾರದಲ್ಲಿ ಬಯಲು ಶೌಚಾಲಯದ ರಸ್ತೆಯನ್ನು ಸರಿಪಡಿಸುತ್ತೇನೆ ಎಂದು ಹೇಳಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಾರದೊಳಗೆ ಸಮಸ್ಯೆಯನ್ನು ಸರಿಪಡಿಸುವರಾ ? ಇಲ್ಲ ಸಮಸ್ಯೆ ಮುಂದುವರಿಯುವುದಾ ಎನ್ನುವುದನ್ನು ಕಾದು ನೋಡಬೇಕಿದೆ.
ಬಯಲು ಶೌಚಾಲಯಕ್ಕೆ ಹೋಗುವ
ರಸ್ತೆಯಲ್ಲಿ ತಿಪ್ಪೇಗುಂಡಿ ಹಾಕಲಾಗಿದೆ.ತಿಪ್ಪೆಗುಂಡಿ ಹಾಕಿದವರಿಗೆ ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ವತಿಯಿಂದ
ಸೂಚನೆ ನೀಡಲಾಗಿದೆ. ತಿಪ್ಪೆಗುಂಡಿಯನ್ನು ತೆರವುಗೊಳಿಸಿದ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.–ಅಜಿತಕುಮಾರ,
ಪಿಡಿಒ ಮುಡಬೂಳ