DDU ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಶಹಾಪೂರ:ಇಂದು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ತಾಲೂಕಿನ ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ದೇವಿಂದ್ರಪ್ಪ ಮೇಟಿ ಗಿಡಗಳು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಯೊಂದು ಜೀವಿಗಳು ಉಸಿರಾಡಲು ಶುದ್ಧಗಾಳಿಯ ಅವಶ್ಯಕತೆ ಇದ್ದು, ಪರಿಸರ ದಿನಾಚರಣೆಯ ದಿನದಂದೇ ಗಿಡ ನೆಟ್ಟು ಬಿಡುವುದಲ್ಲ. ಅದಕ್ಕೆ ನೀರು, ಗೊಬ್ಬರ ಹಾಕಿ ಮರವಾಗಿ ಬೆಳೆಸಿದಾಗ ಮಾತ್ರ ನಮ್ಮ ಮುಂದಿನ ಪೀಳಿಗೆ ಬದುಕಲು ಸಾಧ್ಯ.” ಕಾಡು ಬೆಳೆಸಿ ನಾಡು ಉಳಿಸಿ” ಎಂಬ ನಾಣ್ಣುಡಿಯಂತೆ ಅದನ್ನು ಪ್ರಸ್ತುತ ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಮಕ್ಕಳಿಗೆ ನೀಡಿದರು.

ಮುಖ್ಯೋಪಾಧ್ಯಾಯರು, ಯಂಕಪ್ಪ ಕುರಿ, ಸಿಬ್ಬಂದಿಗಳು ರಾಜೇಶ್, ಸಾಬಯ್ಯ ,ಶಿವು,ದಶಸವಂತರೆಡ್ಡಿ ಮತ್ತು ಮಕ್ಕಳು ಉಪಸ್ಥಿತರಿದ್ದರು.

 

 

About The Author