ಶಹಾಪುರ : ಲಾರಿ ಹಾಯ್ದು ವ್ಯಕ್ತಿ ಸಾವು | ಪ್ರಕರಣ ದಾಖಲು

ಶಹಾಪುರ,,

ನಗರದ ಇಂದಿರಾ ನಗರ ಬಡಾವಣೆಯ ಶಾದಿ ಮಹಲ್ ಬಳಿ ರವಿವಾರ ರಾತ್ರಿ 38 ವರ್ಷದ ವ್ಯಕ್ತಿ ಮೇಲೆ ಲಾರಿ ಹಾಯ್ದು ಮೃತಪಟ್ಟಿದ್ದಾನೆ ಎಂದು ಹೇಳಲಾಗಿದ್ದು,
ಬೆಳಗ್ಗೆ ಮೃತಪಟ್ಟಿರುವ ಸುದ್ದಿ ನಗರದಾದ್ಯಂತ ಹರಡಿದ್ದು  ಕೊಲೆ ಮಾಡಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು ನಗರವನ್ನೇ ಬೆಚ್ಚಿಬಿಳಿಸಿದೆ.ಯಾರೋ ಕೊಲೆ ಮಾಡಿ ಬಿಸಾಕಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು   ತಂಡೊಪತಂಡವಾಗಿ ಜನರು ಆಗಮಿಸಿದ್ದು  ಶವ ನೋಡಲು ಆಗಮಿಸಿರುವ ದೃಶ್ಯ ಕಂಡು ಬಂದಿತು.
ಆದರೆ ಮೃತ ವ್ಯಕ್ತಿ ಇಂದಿರಾ ನಗರದ ನಿವಾಸಿಯಾಗಿದ್ದು ಕಳೆದ ಏಳು ವರುಷದಿಂದ ಕಲ್ಬುರ್ಗಿಯ ಎಂಎಸ್ಕೆ ಮಿಲ್ ಬಳಿ ಹೆಂಡತಿ ಜೊತೆಯಲ್ಲಿ ವಾಸವಾಗಿದ್ದು,ಅಸ್ರಾರ ಶೇಖ್ ಮಹಿಬೂಬ್ ಬೇಲ್ಪೂರ (38) ಗುರುತಿಸಲಾಗಿದೆ.ಮೃತ ವ್ಯಕ್ತಿ ನಗರದ ಇಂದಿರಾ ನಗರದ ನಿವಾಸಿಯಾಗಿದ್ದು, ಆಗಾಗ ಶಹಪುರಕ್ಕೆ ಬಂದು ಹೋಗುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ರವಿವಾರ ಸಂಜೆ ಕಲಬುರ್ಗಿಯಿಂದ ಶಹಪುರಕ್ಕೆ ಬಂದಿದ್ದಾನೆ. ರಾತ್ರಿ 8.30 ರ ಸುಮಾರಿಗೆ ಕಟಿಂಗ್ ಮಾಡಿಸಿಕೊಂಡು ಬರುವುದಾಗಿ ಹೇಳಿ ತನ್ನ ಸಹೋದರನಾದ ಅಬ್ರಾರ್ ನ ಮೋಟರ್ ಸೈಕಲ್ ಮೇಲೆ  ಹೋಗಿದ್ದಾನೆ. ರಾತ್ರಿ 10 ಗಂಟೆಯಾದರು ಮನೆಗೆ ಬಾರದಿದ್ದಾಗ ಮನೆಯವರು ಫೋನ್ ಮಾಡಿದ್ದಾರೆ.  ಸ್ನೇಹಿತರ ಜೊತೆಯಲ್ಲಿದ್ದೇನೆ ಎಂದು ತಿಳಿಸಿದ ಮೃತ ವ್ಯಕ್ತಿ
ನಂತರ ಫೋನ್ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿದೆ. ಎಲ್ಲಾ ಕಡೆ ಹುಡುಕಾಡಿದರು ಸಿಗದಿದ್ದಾಗ ಗಾಬರಿಗೊಂಡಿದ್ದಾರೆ. ಬೆಳಗಿನ ಜಾವ 7 ಗಂಟೆ ಸುಮಾರಿಗೆ ಶಾದಿ ಮಹಲ್ ಬಳಿ ಅಸ್ರಾರ ಶೇಖ್ ಮಹಿಬೂಬ್ ಬೇಲ್ಪೂರ ಮೃತ ದೇಹ ಪತ್ತೆಯಾಯಿತು.
ತಕ್ಷಣ ಶವವನ್ನು ಯಾದಗಿರಿಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆ ವೇಳೆ ದೇಹದ ಮೇಲೆ ಲಾರಿ ಟೈರಿನ ಗುರುತು ಮತ್ತು ದೇಹಕ್ಕೆ  ಕಬ್ಬಿಣ ರಾಡ್ ಚುಚ್ಚಿದ ಗುರುತು ಇದೆ. ಇದರ ಬಗ್ಗೆ  ತನಿಖೆ ನಡೆಯುತ್ತಿದೆ. ಲಾರಿ ಚಾಲಕನ ಬಗ್ಗೆ ಶೋಧ ಕಾರ್ಯ ನಡೆದಿದೆ  ಎಂದು ಪೊಲೀಸ ಇನ್ಸ್ಪೆಕ್ಟರ್ ಸಾಹೇಬ್ ಗೌಡ ಪಾಟೀಲ್ ತಿಳಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಭೇಟಿ.

ಮೃತ ದೇಹ ಸಿಕ್ಕಿರುವ ಸ್ಥಳಕ್ಕೆ ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್, ಪಿಐ. ಎಂಎಸ್ ಪಾಟೀಲ್
ಭೇಟಿ ನೀಡಿ ಮಾಹಿತಿ ಪಡೆದು ತನಿಖೆ ನಡೆಸಿತ್ತಿರುವುದಾಗಿ  ತಿಳಿಸಿದ್ದಾರೆ.

Leave a Reply

Your email address will not be published. Required fields are marked *