ಶಹಾಪೂರ ಗುತ್ತಿಪೇಟೆಯಲ್ಲಿ ವಿದ್ಯುತ್ ಸರ್ಕ್ಯೂಟಿನಿಂದ ಯುವಕ ಬಲಿ : ಸಾರ್ವಜನಿಕರ ಆಕ್ರೋಶ : ಅಧಿಕಾರಿಗಳ ನಿರ್ಲಕ್ಷ : ಅಮಾನತ್ತಿಗೆ ಆಗ್ರಹ

ಶಹಾಪೂರ,,

ನಗರದ ಗುತ್ತಿಪೇಟೆಯಿದ ವಿದ್ಯುತ್ ಸರ್ಕ್ಯೂಟ್ ನಿಂದಾಗಿ ಅಂದಾಜು 16 ವರ್ಷದ ಯುವಕ ಬಲಿಯಾಗಿದ್ದು ನಗರ ಸಭೆ ಜೆಸ್ಕಾಂ ಅಧಿಕಾರದ ನಿರ್ಲಕ್ಷದ ಧೋರಣೆಯೆ ಕಾರಣವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಪಟ್ಟ ಯುವಕ ದರ್ಶನ/ ಭೀಮರಾಯ ಎನ್ನಲಾಗಿದ್ದು ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

“ಯುವಕ ಬಲಿಯಾದ ವಿದ್ಯುತ್ ಕಂಬ” 

 ಮೃತ ಬಾಲಕ ಸೋಮವಾರ ಸಂಜೆ ಮನೆಗೆ ತೆರಳುತ್ತಿದ್ದಾಗ ಕಂಬವನ್ನು ಮುಟ್ಟಿದ ಪರಿಣಾಮ ತೀವ್ರ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾನೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನಗಿಲ್ಲ ಎನ್ನಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ನಗರದಲ್ಲಿ ಹಲವು ಸ್ಥಳಗಳಲ್ಲಿ ಕಂಬದ ತಂತಿಗಳು ಜೋತುಬಿದ್ದಿವೆ. ಇನ್ಸುಲೇಷನ್ ಹರಿದು ಅಪಾಯದ ಸ್ಥಿತಿಯಲ್ಲಿವೆ. ಗುತ್ತಿಪೇಟೆಯಲ್ಲಿ ನಡೆದ ಈ ದುರ್ಘಟನೆ ನಗರವಾಸಿಗಳಿಗೆ ಆತಂಕ ಸೃಷ್ಟಿಸಿದೆ.

ಗುತ್ತಿಪೇಠೆಯ ನಿವಾಸಿಗಳು ನಗರಸಭೆ ಮತ್ತು ಜೆಸ್ಕಾಂ ಅಧಿಕಾರಿಗಳು ಕೆಲವು ಸೂಕ್ಷ್ಮತೆಯನ್ನು ಗಮನಿಸಿ ಇಂತಹ ದುರ್ಘಟನೆಗಳು ಸಂಭವಿಸುವ ಕಣ್ಣೆದುರು ಕಂಡರೂ ಕಾಣದಂತೆ ಮರೆಮಾಚಿ ಹೋಗುವ ಅಧಿಕಾರಿಗಳ ಬೇಜವಾಬ್ದಾರಿತನದಿಂದಲೇ ಇಂತಹ ದುರ್ಘಟನೆಗಳು ಸಂಭವಿಸಿದ್ದು ಅಮಾಯಕರು ಜೀವ ಬಲಿಯಾಗುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.

ಅಧಿಕಾರಿಗಳ ಅಮಾನತ್ತಿಗೆ ಸಾರ್ವಜನಿಕರ ಆಗ್ರಹ :

ಕರ್ತವ್ಯ ಲೋಪ ಎಸಗಿದ ನಗರಸಭೆ ಮುಖ್ಯಾಧಿಕಾರಿ, ಎಇ ಹಾಗೂ ಜೆಸ್ಕಾಂ ಶಾಖಾಧಿಕಾರಿ ವಿರುದ್ಧ ಐಪಿಸಿ ಸೆ. 304(ಎ) ಅಡಿ ನಿರ್ಲಕ್ಷ್ಯತನದ ಪ್ರಕರಣ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಮೃತನ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ಮೃತ ವ್ಯಕ್ತಿಯ ಸ್ಥಳಕ್ಕೆ ಭೇಟಿ ನೀಡಿದ ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *