ದೇಶದ ಪ್ರಧಾನಿ ಅಭಿವೃದ್ದಿ ಬಗ್ಗೆ ಗಮನ ಹರಿಸಬೇಕೇ ಹೊರತು ಒಂದು ಪಕ್ಷದ ವಿರುದ್ಧ ಹರಿಹಾಯುವುದಲ್ಲ ಜಮಾದಾರ ಟೀಕೆ

ಯಾದಗಿರಿ:

ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿ. ದೇಶದ ಬೆಳವಣಿಗೆಯ ಬಗ್ಗೆ ಮಾತ್ರ ಮಾತನಾಡಬೇಕು. ವಿರೋಧ ಪಕ್ಷದವರು ಎಷ್ಟೇ ಟೀಕಿಸಿದರು ದೇಶದ ಆರ್ಥಿಕ ಸುಭದ್ರತೆಗಾಗಿ, ರಕ್ಷಣೆಗಾಗಿ, ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾ ವಿರೋಧ ಪಕ್ಷವನ್ನು ಸಮರ್ಥವಾಗಿ ಎದುರಿಸಬೇಕು. ಆದರೆ ಅವರು ಮಾಡುತ್ತಿರುವುದೇನು. ಪದೇ ಪದೇ ಕಾಂಗ್ರೆಸ್ ಪಕ್ಷವನ್ನು ತೆಗೆದುಕೊಂಡು ಟೀಕಿಸುವುದನ್ನು ಬಿಟ್ಟು ಬೇರೆ ಯಾವ ಕೆಲಸವನ್ನು ಮಾಡುತ್ತಿಲ್ಲ. ದೇಶದ ಪ್ರಧಾನಿಯಾಗಿ ಈ ರೀತಿ ಮಾತನಾಡುವುದು ಸರಿಯಲ್ಲ.

ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಾ ಬಂದಿದೆ. ನಮ್ಮ ಉದ್ದೇಶ ಕ್ಷೇತ್ರಗಳ ಪುನರ್ ವಿಂಗಡನೆ ಮಾಡಬಾರದು. ಜನಸಂಖ್ಯೆ ಆಧಾರಿತವಾಗಿ ಕ್ಷೇತ್ರ ಪುನರ್ ವಿಂಗಡನೆ ಯಾದರೆ ಉತ್ತರ ಭಾರತಕ್ಕೆ ಲಾಭವಾಗುತ್ತದೆಯೆ ಹೊರತು ದಕ್ಷಿಣ ಭಾರತಕ್ಕಲ್ಲ. ಎಲ್ಲ ರಾಜ್ಯಗಳನ್ನು ಸಮತೋಲನವಾಗಿ ತೂಗಿಸಿಕೊಂಡು ಕ್ಷೇತ್ರ ಪುನರ್ವಿಂಗಡಕ್ಕೆ ಕೈ ಹಾಕಬೇಕು.

ನಾವೆಲ್ಲರೂ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎನ್ನುವುದನ್ನು ದೇಶದ ಪ್ರಧಾನಿಯವರು ಮರೆತಿದ್ದಾರೆ. ಇದನ್ನು ಬಿಟ್ಟು ಬರೀ ಕಾಂಗ್ರೆಸ್ ಹೆಸರೇಳಿಕೊಂಡು ರಾಜಕೀಯ ಮಾಡುವುದನ್ನು ಬಿಡಬೇಕು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ರಾಜಕೀಯ ದೃಷ್ಟಿಯಿಂದ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆಯೆ ಹೊರತು ದೇಶದ ಪ್ರಧಾನಮಂತ್ರಿಯನ್ನಲ್ಲ ಎಂದು ಕೆಪಿಸಿಸಿ ರಾಜ್ಯ ಸಂಯೋಜಕ ರಾಜ್ ಮೈನುದ್ದೀನ್ ಟೀಕಿಸಿದ್ದಾರೆ. ಭಯೋತ್ಪಾದಕ ಎನ್ನುವ ಶಬ್ದ ಅರ್ಥಮಾಡಿಕೊಳ್ಳುವುದರಲ್ಲಿ ಬಿಜೆಪಿ ಅರಿತಿಲ್ಲ. ದೇಶದ ಪ್ರಧಾನಿಯಾಗಿ ಒಂದು ಪಕ್ಷದ ವ್ಯಕ್ತಿಗಳ ಮೇಲೆ ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ಇಡಿ ಮತ್ತು ಸಿಬಿಐಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ರಾಜ್ಯಕಾರಣಿಗಳ ಮೇಲೆ ದಾಳಿ ಮಾಡಿಸುತ್ತಿರುವುದು ಯಾವ ಉದ್ದೇಶದಿಂದ.ಅದನ್ನು ಪ್ರಧಾನಿಯವರು ಬಿಡಬೇಕು. ಭಯೋತ್ಪಾದಕ ಶಬ್ದಕ್ಕೆ ನಾನಾರ್ಥಗಳು ಇವೆ. ಅದರ ಅರ್ಥಗಳು ನಿಮಗೆ ತಿಳಿದಿಲ್ಲವೆಂದರೆ ‌ಹೇಗೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಭಯೋತ್ಪಾದಕ ಎಂದಿದ್ದರು. ಅದರ ಬಗ್ಗೆ ಬಿಜೆಪಿ ಪಕ್ಷದವರು ಯಾವುದೇ ಜಕಾರವೆತ್ತಲಿಲ್ಲ. ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರು ಭಯೋತ್ಪಾದಕ ಎಂದರೆ ಬಿಜೆಪಿಯವರು ಉರಿದು ಬೀಳುತ್ತಿದ್ದಾರೆ ಎಂದು ಮೂದಲಿಸಿದರು.

Leave a Reply

Your email address will not be published. Required fields are marked *