ಯಾದಗಿರಿ,,
ಬರುವ ಜುಲೈ ತಿಂಗಳಲ್ಲಿ ಖಾಲಿಯಾಗಲಿರುವ ವಿಧಾನ ಪರಿಷತ್ತಿನ ಸ್ಥಾನಕ್ಕೆ ತಮ್ಮನ್ನು ನಾಮನಿರ್ದೇಶನ ಮಾಡುವ ಮೂಲಕ ಕಳೆದ ಸುಮಾರು ಎರಡು ದಶಕಗಳ ಹಿಂದೇ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಮತ್ತು ಈ ಮೂಲಕ ದೊಡ್ಡ ಸಮುದಾಯಗಳಲ್ಲಿ ಒಂದಾಗಿರುವ ಕುರುಬ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇರವಾಗಿ ಒತ್ತಾಯಿಸಿದ್ದಾರೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ನನ್ನನ್ನು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಅವರೇ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರ್ಪಡೆ ಮಾಡಿಸಿದ್ದಾರೆ. ಆಗ ಖರ್ಗೆ ಕುಟುಂಬದವರು ನನ್ನನ್ನು ಬರುವ ದಿನಗಳಲ್ಲಿ ಎಂಎಲ್‌ಸಿ ಮಾಡುವುದಾಗಿ ಮಾತು ಕೊಟ್ಟಿದ್ದರು. ಇದಕ್ಕೆ ಆಗ ದರ್ಶನಾಪುರ ಅವರೇ ಬಲವಾದ ಸಾಕ್ಷಿಯ ರಾಗಿದ್ದಾರೆ. ಇದಲ್ಲದೇ 2023ರ ಚುನಾವಣೆ ವೇಳೆ ಇದೇ ತರಹದ ಭರವಸೆ ನೀಡಿದ್ದರೂ ಆದರೂ ಇದುವರೆಗೂ ಅವೆಲ್ಲವೂ ಹುಸಿಯಾಗುತ್ತಲ್ಲೇ ಇವೆ. ಕಾರಣ ಈಗ ಮಾಡಬೇಕು ಮತ್ತು ದರ್ಶನಾಪುರ ಅವರು ಪಕ್ಷದ ನಾಯಕರ ಮೇಲೆ ಈ ಕುರಿತಂತೆ ಒತ್ತಡವೂ ಹಾಕಬೇಕೆಂದು ಹೇಳಿದರು.
ಹಿಂದೇ ಕೂಡಾ ಎಂಎಲ್‌ಸಿ, ಎಂಎಲ್‌ಎ ಟಿಕೆಟ್ ಕೇಳಿದಾಗ ಮುಂದೇ ನೋಡೋಣ ಎಂದು ಹೇಳಿದ್ದು ಇದೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿದಾಗಿನಿಂದಲ್ಲೂ ಖರ್ಗೆ ಕುಟುಂಬದ ಅನುಯಾಯಿಯಾಗಿ ಪಕ್ಷ ಹೇಳಿದ ಕೆಲಸವನ್ನು ಪ್ರಮಾಣಿಕವಾಗಿ ಕೆಲಸ ಮಾಡಿದ್ದೆನೆ. ಚುನಾವಣೆಗಳಲ್ಲಿ ಯಾರಿಂದಲ್ಲೂ 10 ರೂ. ಪಡೆಯದೇ ಆದಷ್ಟು ಕೈಯಿಂದಲ್ಲೇ ಖರ್ಚು ಮಾಡಿ ಕೆಲಸ ಮಾಡಿದ್ದೆನೆ ಕೈ ಮತ್ತು ಬಾಯಿ ಶುದ್ಧವಿಟ್ಟುಕೊಂಡೇ ರಾಜಕೀಯ ಜೀವನದಲ್ಲಿ ಕಳೆದ 40 ವರ್ಷಗಳಿಂದಲ್ಲೂ ಇದ್ದೆನೆ ಎಂದರು.
ಪ್ರತಿ ಸಲ ಹೀಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಾಗ ನನಗೆ ಅವಕಾಶ ನೀಡಿ ಎಂದು ಕೇಳಿದರೂ ಅದು ಆಗುತ್ತಿಲ್ಲ, ಇದಕ್ಕೆ ಏನು ಕಾರಣವೋ ತಿಳಿಯುತ್ತಿಲ್ಲ, ನಮ್ಮ ಹಣೆಬರವೇ ಸರಿಯಿಲ್ಲ ಅಂತ ಅನಿಸುತ್ತದೆ. ರಾಜಕೀಯ ನನ್ನನ್ನು ನಂಬಿದವರು ಇದ್ದಾರೆ. ಅವರೆಲ್ಲ ಎನೀ ಶರಣಪ್ಪ ಅವರೇ ನಿಮಗೆ ಎಂಎಲ್ ಮಾಡುತ್ತಾರೋ ಇಲ್ಲವೋ ಬರಿ ಸುಳ್ಳು ಹೇಳಿ ರಾಜಕೀಯ ಜೀವನ ಮುಗಿಸುತ್ತಾರೋ ಎಂದು ಅನೇಕ ಸಲ್ಲ ನನ್ನನ್ನು ಪ್ರಶ್ನಿಸುತ್ತಾ ರೆ. ಹೀಗಾಗಿ ಮನಸ್ಸಿಗೆ ಬಹಳಷ್ಟು ನೋವು ಆಗಿದೆ. ಆದರೂ ರಾಜಕೀಯದಲ್ಲಿ ತಾಳ್ಮೆ ಮುಖ್ಯ ಎನ್ನುವಂತೆ ಇದುವರೆಗು ತುಟಿ ಬಿಚ್ಚದೇ ಕಾಯುತ್ತಿರುವ ಕಾರಣ ಈಗ ಅವಕಾಶ ಮಾಡಿಕೊಡಿ ಎಂದು ಅವರು ಒತ್ತಾಯಿಸಿದ್ದಾರೆ.
ತಮ್ಮ ಸುಧೀರ್ಘ ರಾಜಕೀಯ ಪಯಣದ ಬಗ್ಗೆ ವಿವರಿಸಿದ ಸಲಾದಪುರ, ಈ ಮಂಡಳಿ ಅಧ್ಯಕ್ಷ ಸ್ಥಾನವಾಗಲಿ, ಇಲ್ಲವೇ ಬೇರೆ ಮಂಡಳಿ ಬೇಕೆಂದು ಇಂದಿಗೂ ನಾನು ಕೇಳಿಲ್ಲ, ನಾನು ಎಂಎಲ್‌ಸಿ ಸ್ಥಾನ, ಖಾಲಿಯಿದ್ದಾಗಲೆಲ್ಲ ನಾನು ಇದಕ್ಕಾಗಿ ಅರ್ಜಿ ಹಾಕಿ ಖರ್ಗೆ ಅವರನ್ನು ಮನವಿ ಮಾಡುತ್ತಲೇ ಬಂದಿದ್ದೆನೆ. ಆಯಿತು ನೋಡೋಣ ಎನ್ನುತ್ತಾರೆ, ಎಲ್ಲ ಮುಗಿದ ಮೇಲೆ ಮುಂದೇ ನೋಡೋಣ ಎನ್ನುತ್ತಾರೆ. ಇದೆಲ್ಲ ಕೇಳಿ ನಾನೆಲ್ಲಿ ಹಿಂಗೇ ನಾಯಕರ ಮಾತು ನಂಬೇ ಸಾಯಿತ್ತಿನಿ ಅಂತಾ ಕೆಲವು ಸಲ ಅನಿಸುತ್ತದೆ ಎಂದು ಭಾವುಕರಾಗಿ ಹೇಳಿದರು.
********””****************************
ಸಿದ್ದರಾಮಯ್ಯಗೆ ಇಂದಿಗೂ ಭೇಟಿ ಆಗಿಲ್ಲ.
ನಾನು ಕಲ್ಯಾಣ ಕರ್ನಾಟಕ ಭಾಗದ ಕುರುಬ ಸಮಾಜದ ಹಿರಿಯ ನಾಯಕನೇ, ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಕುರುಬ ಸಮಾಜದವರೇ ಆದರೂ ಇಂದಿಗೂ ನಾನು ಯಾರು ಅಂತಾ ಅವರಿಗೆ ಗೊತ್ತಿಲ್ಲ. ಕಾರಣ ಅವರನ್ನು ಒಂದು ಸಲವೂ ಭೇಟಿ ಮಾಡಿಲ್ಲ. ಯಾಕೇ ಗೊತ್ತಾ ನಮ್ಮ ನಾಯಕರು ಮಲ್ಲಿಕಾರ್ಜುನ ಖರ್ಗೆ ಎಂದು ಒಪ್ಪಿಕೊಂಡು ರಾಜಕೀಯ ಮಾಡುವವನು. ಒಂದು ಸಲ ಮಾತು ಕೊಟ್ಟರೇ ಮುಗಿಯಿತು, ಅದನ್ನು ಶಿರಸಾ ವಹಿಸಿ ! ಮುಗಿಸುವ ಜಾಯಮಾನ ನನ್ನದು. ಅದಕ್ಕಾಗಿ ಹಿಂದೇ ನನಗೆ ಕೊಟ್ಟ ಮಾತಿನಂತೇ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು, ದರ್ಶನಾಪುರ ಅವರು ಈ ನಿಟ್ಟಿನಲ್ಲಿ ಒತ್ತಾಯ ಮಾಡಬೇಕು.
ಶರಣಪ್ಪ ಸಲಾದಪುರ.
ಅಧ್ಯಕ್ಷರು, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು
**************************************
ಪ್ರೀತಿ,ಅಭಿಮಾನಕ್ಕೆ ಅಧ್ಯಕ್ಷನಾಗಿದ್ದೆನೆ
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಾಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶರಣಪ್ಪ, ನಾನೇನು ಇದು ಕೇಳಿರಲಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರು ದೂರವಾಣಿ ಮೂಲಕ ಮಾತನಾಡಿ, ನಿಮಗೆ ಈ ಸ್ಥಾನ ಕೊಡಲಾಗುತ್ತಿದೆ. ಸ್ವೀಕರಿಸಿರಿ ಎಂದರು, ಆಗ ಸರ್ ನನಗೆ ಇದು ಬೇಡ, ಎಂಎಲ್‌ಸಿ ಮಾಡಿ ಎಂದೆ, ಆಗ ಅವರು ಮುಂದೇ ನೋಡೋಣ ಸದ್ಯ ಇದು ಒಪ್ಪಿಕೊಳ್ಳಿ ಎಂದಾಗ ಪ್ರೀತಿ ಮತ್ತು ಅಭಿಮಾನಕ್ಕೆ ಆಯಿತು ಎಂದಿದ್ದೆನೆ.ಹಿಂದೇ ಯಾರು ಈ ಸ್ಥಾನದಲ್ಲಿ ಬಹಳ ದಿನ ಉಳಿದಿಲ್ಲ, ಕಾರಣ ಕಾರ್ ಚಾಲಕನಿಗೆ ಸಂಬಳ ಅಧ್ಯಕ್ಷನಿಗೆ ಇಲ್ಲ. ಇದೆಲ್ಲ ಹೇಳಬಾರದು, ತಾಳಿ, ತಾಳಿ ಸಾಕಾಗಿ, ಬಾರವಾದ ಮನಸ್ಸಿನಿಂದ ಬಾಯಿಬಿಟ್ಟಿರುವೆ ಎಂದು ಅತ್ಯಂತ ಭಾವುಕರಾದರು.