ದಾವಣಗೆರೆ ದಂಗಲ್ | ಶಿಸ್ತು ಕ್ರಮದ ಎಚ್ಚರಿಕೆ | ಸಮುದಾಯದ ಪರ ನಿಂತ ಮುಸ್ಲಿಂ ನಾಯಕರು | 2028ರ ಚುನಾವಣೆಯಲ್ಲಿ ಉತ್ತರ ಕೊಡುವೆವು !!

ಬಸವರಾಜ ಕರೇಗಾರ

ದಾವಣಗೆರೆ,, 

ರಾಜ್ಯದಲ್ಲಿ ಉಪಚುನಾವಣೆ ಮುಗಿದಿದ್ದು ಮೇ 4 ಕ್ಕೆ ಫಲಿತಾಂಶ ಪ್ರಕಟಗೊಳ್ಳಬೇಕಿದೆ. ದಾವಣಗೆರೆ ಉಪಚುನಾವಣೆ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ.ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ವೋಟ್ ಬ್ಯಾಂಕ್ ಆಗಿದ್ದ ಮುಸ್ಲಿಮರು ದಾವಣಗೆರೆ ಉಪಚುನಾವಣೆಗಳಲ್ಲಿ ಕೈ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಆಂತರಿಕ ವರದಿ ಹೈಕಮಾಂಡ್ ಕೈ ಸೇರಿದೆ. ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಮುಸ್ಲಿಂ ನಾಯಕರ ವಿರುದ್ಧ  ಶಿಸ್ತು ಕ್ರಮಕ್ಕೆ ಮುಂದಾಗಿದ್ದು ದಾವಣಗೆರೆ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ ಅವರನ್ನು ರಾಜ್ಯ ಕೆಪಿಸಿಸಿ ಅಧ್ಯಕ್ಷರು ಉಚ್ಚಾಟಿಸಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರಾಜೀನಾಮೆ ನೀಡಿದ್ದಾರೆ.ಉಪಚುನಾವಣೆಯಲ್ಲಿ ಇವರಿಬ್ಬರೂ ಕೆಲಸ ಮಾಡಿಲ್ಲ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಕ್ರಮ ಜರುಗಿಸಿದೆ! ಮೇ 4ರ ನಂತರ ದಾವಣಗೆರೆಯಲ್ಲಿ ಕಾಂಗ್ರೆಸ್ ಸೋತರೆ ಜಹೀರ್  ಅಹಮ್ಮದ ಸಚಿವ ಸ್ಥಾನ ಕಳೆದುಕೊಳ್ಳಬಹುದು ಎನ್ನಲಾಗಿದೆ.
ಅಬ್ದುಲ್ ಜಬ್ಬರ್ 
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ 
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ ಅವರು ಆತುರದಿಂದ ನಿರ್ಧಾರ ಕೈಗೊಂಡಿದ್ದಾರೆ ಎಂದು ಮುಸ್ಲಿಂ ನಾಯಕರು ಕಿಡಿ ಕಾರಿದ್ದಾರೆ. ಅಲ್ಪಸಂಖ್ಯಾತರ ಘಟಕವನ್ನೇ ವಿಸರ್ಜಿಸುವ  ಅವಶ್ಯಕತೆ ಏನಿತ್ತು ಎಂದು ಕಾಂಗ್ರೆಸ್ ಪಕ್ಷದಲ್ಲಿಯೇ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
“ಕಾಂಗ್ರೆಸ್ ಪಕ್ಷದ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಇಸ್ಲಾಂ ಧರ್ಮದ ಮೌಲ್ವಿಯವರು…” 

*********

2028ಕ್ಕೆ ನೋಡಿಕೊಳ್ಳುತ್ತೇವೆ ಎಂದ ಮುಸ್ಲಿಂ ಸಮುದಾಯ!!
ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿರುವ ಮುಸ್ಲಿಂ ಸಮುದಾಯದ ನಾಯಕರು ಇನ್ನೆರಡು ವರ್ಷಗಳ ನಂತರ ವಿಧಾನಸಭಾ ಚುನಾವಣೆ ಆಗಮಿಸಲಿದ್ದು, ಅಂದು ನಾವು ಕಾಂಗ್ರೆಸ್ ಪಕ್ಷವನ್ನು ನೋಡಿಕೊಳ್ಳುತ್ತೇವೆ ಎಂದು ಕಿಡಿಗಾರಿದ್ದಾರೆ. ಹಲವು ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಶಾಮನೂರು ಕುಟುಂಬಕ್ಕೆ ಸಮುದಾಯ ಯಾವತ್ತಿಗೂ ಬೆಂಬಲ ನೀಡುತ್ತಾ ಬಂದಿತ್ತು. ಪ್ರಸ್ತುತ ಉಪ ಚುನಾವಣೆ ಫಲಿತಾಂಶದ ನಂತರವೇ ಗೊತ್ತಾಗುತ್ತದೆ. ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಭದ್ರಕೋಟೆಯೇ ಮುಸ್ಲಿಂ ಸಮುದಾಯ. ಅವರ ಮತ ಬ್ಯಾಂಕ್ ನ್ನು ಕಾಂಗ್ರೆಸ್ ಪಕ್ಷ ಕಳೆದುಕೊಳ್ಳಲಿದೆಯಾ!   ಶಿಸ್ತು ಕ್ರಮದ ಹೆಸರಿನಲ್ಲಿ ನಮ್ಮ ಸಮುದಾಯದ ನಾಯಕರನ್ನು ಬಲಿ ಕೊಡುತ್ತಿರುವುದರ ಬಗ್ಗೆ ಮುಸ್ಲಿಂ ಮೌಲ್ವಿಗಳು ಕೂಡ ಕೆಂಡಮಂಡಲವಾಗಿದ್ದು 2028 ರ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
*********
ನಜೀರ್ ಅಹ್ಮದ್ 
ಮುಖ್ಯಮಂತ್ರಿ ಕಾರ್ಯದರ್ಶಿ
**************

ಅಹಿಂದ ನಾಯಕತ್ವಕ್ಕೆ ಕರೆ!

 ಸಿಟ್ಟಿಗೆದ್ದ ಮುಸ್ಲಿಂ ನಾಯಕರು ಅಹಿಂದ ನಾಯಕತ್ವಕ್ಕೆ ಕರೆ ನೀಡಿದ್ದಾರೆ. ಸದಾ ಕಾಂಗ್ರೆಸ್ ಪರ ನಿಂತು ಗೆಲ್ಲಿಸಿಕೊಂಡು ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಕುಟುಂಬದ ಸಲುವಾಗಿ ಅಹಿಂದ ನಾಯಕರನ್ನು ಬಲಿಕೊಡುತ್ತಿರುವದು ಎಷ್ಟರಮಟ್ಟಿಗೆ ಸರಿ ಎಂದು ಕಿಡಿ ಕಾರಿದ್ದಾರೆ. ಕಳೆದ ಚುನಾವಣೆಯಲ್ಲಿ ಶೇ.85ರಷ್ಟು ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದರು. ಶಿಸ್ತು ಕ್ರಮದ ಹೆಸರಿನಲ್ಲಿ ಮುಸ್ಲಿಂ ನಾಯಕರನ್ನು ತುಳಿಯಲಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ. 2028ರ ಚುನಾವಣೆಯಲ್ಲಿ ಎಲ್ಲಾ ಅಹಿಂದ ನಾಯಕರು ಒಗ್ಗೂಡಬೇಕಿಗಿ ಎಂದು ಎಲ್ಲಾ ಅಹಿಂದ ಸಮುದಾಯಗಳನ್ನು ಒಂದುಗೂಡಿಸಲು ಕರೆ ನೀಡಿದ್ದಾರೆ.
*******
ನಾಯಕತ್ವದ ಕೊರತೆ. ನಿಗಿಸಿದ ಸಚಿವ ಜಹೀರ್ ಅಹ್ಮದ್..
ಎಷ್ಟೋ ವರ್ಷಗಳ ನಂತರ ರಾಜ್ಯಾದ್ಯಂತ ಸಂಚಾರ ಮಾಡಿ ಮುಸ್ಲಿಮರನ್ನು ಒಟ್ಟುಗೂಡಿಸಿ ಒಂದು ಸಮುದಾಯದ ನಾಯಕನೆಂದು ಬಿಂಬಿಸಿಕೊಂಡವರು ಸಚಿವ ಜಹೀರ್  ಅಹಮದ್ ಖಾನ್. ಪ್ರತೀ ಕ್ಷೇತ್ರದ ಜನರ ನಾಡಿಮಿಡಿತ ಅರಿತು, ಕಳೆದ ಚುನಾವಣೆಯಲ್ಲಿ ರಾಜ್ಯಾದ್ಯಂತ ಸಂಚರಿಸಿ, ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣಿ ಕರ್ತರಾಗಿದ್ದರು. ಕೊನೆಗೂ ಮುಸ್ಲಿಂ ಸಮುದಾಯಕ್ಕೆ ಒಬ್ಬ ರಾಜ್ಯನಾಯಕ ದೊರೆತಿದ್ದಾನೆ ಎನ್ನುವಾಗಲೆ ದಾವಣಗೆರೆ ರಾಜಕೀಯ ದಂಗಲ್ ಎದುರಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ಮುಸ್ಲಿಮ್ ನಾಯಕರಿದ್ದಾರೆ.ಆದರೆ ತಮ್ಮ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಂಡಿದ್ದಾರೆ.ಜಹೀರ್ ಅಹ್ಮದ್ ರಾಜ್ಯಾದ್ಯಂತ ಸಂಚರಿಸಿ ಪ್ರಬಲ ನಾಯಕತ್ವ ಗುರುತಿಸಿಕೊಂಡಿದ್ದರು.
***********

SDPI ಗೆ ಹಣ ನೀಡಿದ್ದು ಸುಳ್ಳು !!

ದಾವಣಗೆರೆಯಲ್ಲಿ ಎಸ್ಡಿಪಿಐ ಪಕ್ಷದ ವತಿಯಿಂದ ಅಭ್ಯರ್ಥಿ ಅಪ್ಸರ್ ಕೊಟ್ಟಿ  ಸ್ಪಷ್ಟನೆ ನೀಡಿದ್ದು ಸಚಿವ ಜಹೀರ್ ಅಹಮದ್ ಖಾನ್ 10 ಕೋಟಿ ನೀಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ತಿಳಿಸಿದ್ದಾರೆ.
*********
ಶಾಮನೂರು ಶಿವಶಂಕರಪ್ಪನವರ ಮೇಲೆ ಕ್ರಮವಿಲ್ಲವೇಕೆ ?. 
ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪನವರು ಶಿವಮೊಗ್ಗ ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರ ಒಳ್ಳೆಯ ಕೆಲಸ ಮಾಡಲು ರಾಘವೇಂದ್ರ ಅವರಿಗೆ ಮತ ಹಾಕಿ ಎಂದು ಮಾತನಾಡಿದ್ದರು. ಅದರ ಬಗ್ಗೆ ಕಾಂಗ್ರೆಸ್ ಪಕ್ಷ ಏಕೆ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಮುಸ್ಲಿಂ ನಾಯಕರು ಆಕ್ರೋಶ ಹೊರಹಾಕಿದ್ದಾರೆ.