ಯಾದಗಿರಿ,,
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ VRL ಬಸ್ ಮತ್ತು ಕಾರ್ ನಡುವೆ ಬೀಕರ ಅಪಘಾತ ಸಂಭವಿಸಿದ್ದು ಕಾರಿನಲ್ಲಿರುವ ಒಂದೇ ಕುಟುಂಬದ ಎಂಟು ಜನರ ಪೈಕಿ 6 ಜನರು ಸಜೀವ ದಹನವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಖಾಸಗಿ ಬಸ್ಸು ಬೆಂಗಳೂರಿನಿಂದ ಕಲಬುರ್ಗಿಗೆ ಹೊರಟಿತ್ತು ಎನ್ನಲಾಗಿದೆ.

ಶುಕ್ರವಾರ ಇಂದು ಬೆಳಿಗ್ಗೆ 11:00ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಮೃತಪಟ್ಟವರಲ್ಲಿ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಟ್ಟಣ ಪಂಚಾಯಿತಿ ಸದಸ್ಯರಾದ ಕೃಷ್ಣನಾಯಕ ಕುಟುಂಬದವರೆಂದು ತಿಳಿದು ಬಂದಿದ್ದು, ಇಂದು ಅಮಾವಾಸ್ಯೆ ನಿಮಿತ್ತ ದೇವಸ್ಥಾನಕ್ಕೆ ಕೃಷ್ಣನಾಯಕ ಕುಟುಂಬದವರು ಕಾರ್ ಮೂಲಕ ಪ್ರಯಾಣಿಸಿದ್ದರೆಂದು ತಿಳಿದುಬಂದಿದೆ.

ಮೃತಪಟ್ಟವರಲ್ಲಿ ಕೃಷ್ಣ ನಾಯಕ, ಅನಂತಕಲಾ, ಶರಣಪ್ಪ, ನಿಸರ್ಗ, ಸಿದ್ದಾರ್ಥ, ಶಶಿಕಲಾ ಸೇರಿದಂತೆ ಏಳು ಜನರು ಮೃತಪಟ್ಟಿದ್ದು ಅದ್ವಿಕಾ, ಶ್ರೀನಿಧಿ ಇಬ್ಬರೂ ಸ್ಥಳೀಯರಿಂದ ರಕ್ಷಿಸಲಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಬಸ್ಸಿನ ಎಮರ್ಜೆನ್ಸಿ ಹಿಂಬಾಗಿಲಿನಿಂದ ಕೆಳಗಿಳಿದರು ಎನ್ನಲಾಗಿದೆ. ಖಾಸಗಿ ಬಸ್ ಮತ್ತು ಕಾರ್ ಬೆಂಕಿ ಗಾಹುತಿಯಾಗಿ ಸಂಪೂರ್ಣ ಭಸ್ಮವಾಗಿ ಕರಕಲಾಗಿವೆ. ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕ ದಳದವರು ಆಗಮಿಸಿದ್ದು ಅಪಘಾತ ಹೇಗೆ ಸಂಭವಿಸಿದೆ ಎನ್ನುವುದನ್ನು ತಿಳಿಯಬೇಕಿದೆ.