ಶಹಾಪುರ : ಬಾಬಾ ಸಾಹೇಬರ 135ನೇ ಜಯಂತೋತ್ಸವ : ಶಿಕ್ಷಣ ನೀಡುವ ಮೂಲಕ ಸಮಾಜ ಮತ್ತು ಸಮುದಾಯಗಳ ಅಭಿವೃದ್ಧಿ ಸಾಧ್ಯ : ಪೂಜ್ಯ ಜ್ಞಾನ ಪ್ರಕಾಶ ಸ್ವಾಮೀಜಿ  

ಶಹಾಪುರ,

ಶಿಕ್ಷಣವು ಸಮಾಜದ ಅಭಿವೃದ್ಧಿಗೆ ಮುಖ್ಯವಾಗಿದೆ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಒತ್ತು ನೀಡಿದ್ದರು. ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜ ಮತ್ತು ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದ್ದರು ಎಂದು ಉರಿಲಿಂಗಪೆದ್ದಿ ಮಠದ ಪೂಜ್ಯ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರು ಕರೆ ನೀಡಿದರು.

ತಾಲೂಕಿನ ಸಿಪಿಎಸ್ ಶಾಲಾ ಮೈದಾನದಲ್ಲಿ ಬಾಬಾಸಾಹೇಬ ಅಂಬೇಡ್ಕರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರುಜಯಂತಿಗಳು ಡಿಜಿ,ಪ್ಲೇಕ್ಸನಿಂದ ಸಂಭ್ರಮಿಸುವುದಕ್ಕಿಂತ ಪ್ರತಿಯೊಬ್ಬರು ನಿಮ್ಮ ಮಕ್ಕಳಿಗೆ ಪುಸ್ತಕ ನೀಡಿ. ಶಿಕ್ಷಣವು ಸಮಾನತೆ ಮತ್ತು ಸ್ವಾಭಿಮಾನಕ್ಕೆ ದಾರಿ ಮಾಡಿಕೊಡುತ್ತದೆ. ಸಮಾಜದ ಎಲ್ಲಾ ಸಮಸ್ಯೆಗಳನ್ನು ಶಿಕ್ಷಣದ ಮೂಲಕ ಪರಿಹರಿಸಬಹುದು. ಅವರ ಆಶಯಗಳನ್ನು ಈಡೇರಿಸಲು ಶಿಕ್ಷಣ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಶಿಕ್ಷಣದ ಮೂಲಕ ಅಂಬೇಡ್ಕರ್ ಅವರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಬಹುದು.ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ.ಅಂಬೇಡ್ಕರ್ ಅವರು ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿದವರು.ಅವರ ಆದರ್ಶಗಳು ಸಮಾಜದ ಬೆಳವಣಿಗೆಗೆ ದಾರಿದೀಪವಾಗಿವೆ. ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಮಾಜವನ್ನು ಸುಧಾರಿಸಿದವರು ಬಾಬಾಸಾಹೇಬರು.ಅಂಬೇಡ್ಕರ್ ಅವರು ಜ್ಞಾನ ಶಿಖರವಾಗಿದ್ದರು.ಶಿಕ್ಷಣದಿಂದ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟರು ಎಂದು ಹೇಳಿದರು.

ಬೆಂಗಳೂರಿನ ವಿವಿ ಸಹಾಯಕ ಪ್ರಾಧ್ಯಾಪಕ ಡಾ‌.ಸುರೇಶ ಗೌತಮ ಉಪನ್ಯಾಸಕರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಜಯಂತೋತ್ಸವ ಸಮಿತಿ ಅಧ್ಯಕ್ಷ ರಾಜು ಅಣಬಿ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಶಾಸಕ ಗುರುಪಾಟೀಲ ಶಿರವಾಳ,ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಬಿಜೆಪಿ ನಾಯಕ ಅಮೀನರಡ್ಡಿ ಯಾಳಗಿ,ಅಯ್ಯಣ್ಣ ಕನ್ಯಾಕೊಳೂರ,ದೇವಿಂದ್ರಪ್ಪಗೌಡ ಗೌಡಗೇರಿ,ಗೌಡಪ್ಪಗೌಡ ಆಲ್ದಾಳ, ಶಿವುಮಾಂತ ಚಂದಾಪುರ,ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ,ಶ್ರೀಶೈಲ ಹೊಸ್ಮನಿ,ಸಣ್ಣ ನಿಂಗಣ್ಣ ನಾಯ್ಕೋಡಿ, ಶಿವುಪುತ್ರ ಜವಳಿ,ಮಲ್ಲಣ್ಣ ಗೋಗಿ, ಹೊನ್ನಪ್ಪ ಗಂಗನಾಳ, ರಾಯಪ್ಪ ಸಾಲಿಮನಿ ಸೇರಿದಂತೆ ದಲಿತಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.