ಕಟ್ಟಡ ಕಾರ್ಮಿಕರಿಗೆ ನಿವೇಶನ ಒದಗಿಸುವಂತೆ ಸಚಿವರಿಗೆ ಮನವಿ

ಶಹಾಪುರ,,

ನಗರದಲ್ಲಿ ಬಡ ಕಟ್ಟಡ ಕಾರ್ಮಿಕರಿದ್ದು ಸ್ವಂತ ನಿವೇಶನ ಇಲ್ಲದೆ ಪರದಾಡುತ್ತಿದ್ದಾರೆ. ನಗರದ ಸರ್ವೆ ನಂ.೧೨೦ ರಲ್ಲಿ ಆಶ್ರಯ ಕಾರ್ಡ್ ಹೊಂದಿರುವ ಬಡ ಕಟ್ಟಡ ಕಾರ್ಮಿಕರಿಗೆ ಮನೆ/ನಿವೇಶನ ಒದಗಿಸುವಂತೆ ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಪ್ರದೀಪ್ ಅಣಬಿಯವರು ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ಮನವಿ ಮಾಡಿದರು. ಮನೆಪತ್ರ ಸಲ್ಲಿಸಿದ ಅವರು ತಾಲೂಕಿನಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ನೊಂದಾಯಿತ ಕಟ್ಟಡ ಕಾರ್ಮಿಕರು ಇದ್ದು, ಇವರು ಲೇಬರ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಅರ್ಹ ಫಲಾನುಭವಿಗಳಾಗಿದ್ದಾರೆ. ಇವರಿಗೆ ಸ್ವಂತ ಮನೆ ಇಲ್ಲದ ಕಾರಣ, ಅಲ್ಪ ಆದಾಯದಲ್ಲಿ ಜೀವನ ನಡೆಸಲು ಕಷ್ಟವಾಗುತ್ತಿದ್ದು, ಅನೇಕರು ದೂರದ ನಗರಗಳಿಗೆ ವಲಸೆ ಹೋಗಿ ಸಂಕಷ್ಟದಲ್ಲಿದ್ದಾರೆ. ಕನಿಷ್ಠ ೧೦೦ ಜನ ಬಡ ಕಟ್ಟಡ ಕಾರ್ಮಿಕರಿಗೆ ಮನೆ ಅಥವಾ ನಿವೇಶನ ಮಂಜೂರು ಮಾಡುವಂತೆ ಸಚಿವರಿಗೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಸಂಘದ ಭೋಜಪ್ಪ ಮುಂಡಾಸ ಇದ್ದರು.

Leave a Reply

Your email address will not be published. Required fields are marked *