ದಾವಣಗೆರೆ ಉಪ ಚುನಾವಣೆ ಉಸ್ತುವಾರಿಯಾಗಿ ಬಿಎಂ.ಪಾಟೀಲ ನೇಮಕ

ಶಹಾಪುರ,,

 ಕರ್ನಾಟಕ ರಾಜ್ಯದಲ್ಲಿ ದಾವಣಗೆರೆ ಮತ್ತು ಬಾಗಲಕೋಟೆಯ ಉಪಚುನಾವಣೆ ಏಪ್ರಿಲ್ ಒಂಬತ್ತರಂದು ನಡೆಯಲಿದ್ದು ಚುನಾವಣಾ ಪ್ರಚಾರ ರಂಗೇರುತ್ತಿದೆ. ಏಪ್ರಿಲ್ ಒಂಬತ್ತರಂದು ನಡೆಯುವ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಘಟಾನುಘಟಿ ನಾಯಕರನ್ನು ಉಪಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದ್ದು, ಅದೇ ರೀತಿಯಾಗಿ ಕೆಪಿಸಿಸಿ ರಾಜ್ಯ ವಕ್ತಾರರು ಹಾಗೂ ರಾಜ್ಯ ಸಂಯೋಜಕರು ಕುರುಬ ಸಮುದಾಯದ ಯುವ ಮುಖಂಡರಾದ ಬಿ ಎಂ ಪಾಟೀಲ್ ಅವರನ್ನು ದಾವಣಗೆರೆ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಯನ್ನಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ನೇಮಕ ಮಾಡಿ ಆದೇಶಿಸಿದ್ದಾರೆ. ಬಿ ಎಂ ಪಾಟೀಲರು ಈ ಹಿಂದೆ ಹಲವಾರ ಉಪ ಚುನಾವಣೆಯಲ್ಲಿ ವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ.ಸಂಘಟನಾ ಚತುರರಾದ ಬಿ ಎಂ ಪಾಟೀಲರ ಕಾರ್ಯಕ್ಷಮತೆಯನ್ನು ಅರಿತ ಕಾಂಗ್ರೆಸ್ ಪಕ್ಷ ದಾವಣಗೆರೆ ಕ್ಷೇತ್ರದ 232ನೇ ಬೂತನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲು ನಾಳೆ ನಡೆಯುವ ಸಭೆಯಲ್ಲಿ ಪಕ್ಷ ಜವಾಬ್ದಾರಿ ವಹಿಸಲಿದೆ. ದಾವಣಗೆರೆ ಕ್ಷೇತ್ರದಲ್ಲಿ 25000 ಕ್ಕಿಂತಲು ಹೆಚ್ಚು ಕುರುಬ ಸಮುದಾಯದ ಮತಗಳಿದ್ದು ಆ ಮತಗಳನ್ನು ಸೆಳೆಯಲು ಬಿ ಎಂ ಪಾಟೀಲರು ಶ್ರಮಿಸಬೇಕಿದೆ. ಕಾಂಗ್ರೆಸ್ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬರುವಂತೆ ಪಕ್ಷದ ಪರ ಪ್ರಚಾರ ಕೈಗೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬಿಎಮ್ ಪಾಟೀಲರು ಕಾಂಗ್ರೆಸ್ ಪಕ್ಷ ನನಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪಾಲಿಸಿ ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *