ಆರ್ ಡಿ ಸಿ ಸಿ ಬ್ಯಾಂಕ್ ನೇಮಕಾತಿ ಅಕ್ರಮ / ರಿಸರ್ವ್ ಬ್ಯಾಂಕ್ ನಿಯಂತ್ರಣ ಕಾಯ್ದೆ ತಿದ್ದುಪಡಿ / ನಿರ್ದೇಶಕರ ಆಡಳಿತ ಅವಧಿ ಹತ್ತು ವರ್ಷಕ್ಕೆ ಸೀಮಿತ 

ರಾಯಚೂರು,

ಕೇಂದ್ರ ಸರಕಾರ ಭಾರತೀಯ ರಿಸರ್ವ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ ಆಗಸ್ಟ್ 2025 /10(2)(ಜಿ)ಯ ಪ್ರಕಾರ ಸಹಕಾರಿ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ನಿರ್ದೇಶಕರ ಅವಧಿಯ ಕುರಿತು ಹೊರಡಿಸಿರುವ(ಆದೇಶ) ಸುತ್ತೋಲೆಯ ಅನ್ವಯ ಪ್ರತಿ ರಾಜ್ಯ ಅಪೆಕ್ಸ್  ಬ್ಯಾಂಕ್,  ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ)ಹಾಗೂ ಪಟ್ಟಣ ಸಹಕಾರ ಬ್ಯಾಂಕುಗಳ ನಿರ್ದೇಶಕರ ಆಡಳಿತ ಮಂಡಳಿಗೆ ನಿರಂತರ 10 ವರ್ಷ ಮಾತ್ರ ನಿರ್ದೇಶಕರಾಗಲು ಅವಕಾಶ ಮಾಡಿಕೊಡಲಾಗಿದೆ. ಹತ್ತು ವರ್ಷ ಅವಧಿ ಮೀರಿ ನಿರ್ದೇಶಕರಾದವರು ಅನರ್ಹರಾಗುತ್ತಾರೆ ಎಂದು ಆದೇಶಿಸಿದೆ. ಕರ್ನಾಟಕ ರಾಜ್ಯದ ಅಪೇಕ್ಸ ಬ್ಯಾಂಕ್ ಮತ್ತು ಡಿಸಿಸಿ ಹಾಗೂ ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಸುತ್ತೋಲೆ ಈಗಾಗಲೇ 2025 ಆಗಸ್ಟ್ ಒಂದಕ್ಕೆ ಸುತ್ತೋಲೆ ಕಳುಹಿಸಲಾಗಿದೆ.

ಆದರೆ ರಾಯಚೂರಿನ ಆರ್ಡಿಸಿಸಿ ಬ್ಯಾಂಕ್ ಇತ್ತೀಚೆಗೆ ನವಂಬರ್ ನಲ್ಲಿ ಬ್ಯಾಂಕ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಟೆಂಡರ್ ಹುದ್ದೆಗಳಿಗೆ ನೇಮಕಾತಿ ಹೊರಡಿಸಿ ಈಗಾಗಲೇ ಪರೀಕ್ಷಾರ್ಥಿಗಳಿಗೆ ಪರೀಕ್ಷೆಯನ್ನು ಮುಗಿಸಿದೆ. ಈ ನೇಮಕಾತಿಯೇ ಅಕ್ರಮ ಎಂದು ಹೇಳಲಾಗಿದ್ದು, ಕೇಂದ್ರ ಸಹಕಾರ ಕಾಯ್ದೆಯನ್ವಯ ಆಗಸ್ಟ್ ಒಂದು 2025 ರಂದು ಜಾರಿಗೆ ಬಂದಿರುವ ಕಾಯ್ದೆ ಪ್ರಕಾರ ನೇಮಕಾತಿ ನವಂಬರ್ ತಿಂಗಳಲ್ಲಿ ನೋಟಿಫಿಕೇಶನ್ ಮಾಡಲಾಗಿದೆ. ಆದರೆ ಈ ಕಾಯ್ದೆಯಡಿ ಆರ್ಡಿಸಿಸಿ ಬ್ಯಾಂಕ್ ಸಹಕಾರಿ ಬ್ಯಾಂಕಿನಲ್ಲಿರುವ ಅಧ್ಯಕ್ಷರನ್ನು ಒಳಗೊಂಡು ಹತ್ತು ವರ್ಷಕ್ಕಿಂತಲೂ ಮೀರಿ ನಿರ್ದೇಶಕರು ಸತತವಾಗಿ ಅಧಿಕಾರ ಆಯ್ಕೆಯಾಗಿ ವಿವಿಧ ಹುದ್ದೆಗಳಲ್ಲಿ ಅಧಿಕಾರ ಅನುಭವಿಸಿದ್ದಾರೆ. ಇಂತಹ ಅಧ್ಯಕ್ಷ ಮತ್ತು ನಿರ್ದೇಶಕರನ್ನು ಸೇರಿ ಕೇಂದ್ರ ಜಾರಿಗೆ ಸಹಕಾರಿ ಕಾಯ್ದೆಯನ್ನು ಉಲ್ಲಂಘಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಲ್ಲದೆ ಅಧಿಕಾರವನ್ನು ಚಲಾಯಿಸಿ ಬ್ಯಾಂಕ್ ನೇಮಕಾತಿಯನ್ನು ಕೂಡ ಮಾಡಿಕೊಳ್ಳಲಾಗಿದೆ. ಇದರಿಂದ ಭಾರತೀಯ ರಿಸರ್ವ ಬ್ಯಾಂಕ್ ನಿಯಮ ಉಲ್ಲಂಘಿಸಲಾಗಿದೆ ಎಂದು ಸ್ಪಷ್ಟವಾಗುತ್ತದೆ. ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ವಿಶ್ವನಾಥ್ ಪಾಟೀಲ್ ತೋರಣದಿನ್ನಿ, ಶರಣಗೌಡ ಬಯ್ಯಾಪುರ, ರಾಜಶೇಖರ ನಾಯಕ, ಪಂಪನಗೌಡ ಬಾದರ್ಲಿ ನಿರಂತರವಾಗಿ 10 ವರ್ಷಗಳಿಗಿಂತಲೂ ಅಧಿಕ ಅವಧಿಗೆ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ಇವರನ್ನೋಳಗೊಂಡು  ಬ್ಯಾಂಕ್ ನೇಮಕಾತಿ ನಡೆಯುತ್ತಿದ್ದು ಇದರಲ್ಲಿ ಭಾರಿ ಅಕ್ರಮ ನಡೆಯುವ ಸಾಧ್ಯತೆಗಳಿವೆ.ಇಂತಹ ಅನರ್ಹರಾಗಬೇಕಿದ್ದ ನಿರ್ದೇಶಕರನ್ನು ಇಟ್ಟುಕೊಂಡು ಯಾವ ಆಧಾರದ ಮೇಲೆ ಬ್ಯಾಂಕ್ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎನ್ನುವುದೇ ಪ್ರಶ್ನಾರ್ಹವಾಗಿದೆ. ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರು ಸ್ಪಂದಿಸುತ್ತಿಲ್ಲ. ಕೂಡಲೇ ಬ್ಯಾಂಕ್ ನೇಮಕಾತಿ ಸ್ಥಗಿತಗೊಳಿಸಿ 10 ವರ್ಷ ಮೇಲ್ಪಟ್ಟ ನಿರ್ದೇಶಕರನ್ನು ಅನರ್ಹಗೊಳಿಸಬೇಕು. ಇಲ್ಲದಿದ್ದರೆ ನ್ಯಾಯಾಂಗದ ಮೊರೆಹೋಗಲಾಗುವುದು ಎಂದು ದೇವದುರ್ಗ ತಾಲೂಕು ಭ್ರಷ್ಟಾಚಾರಿ ವಿರೋಧಿ ಆಂದೋಲನದ ಪ್ರಧಾನ ಸಂಚಾಲಕರಾದ ಜಿ ಬಸವರಾಜ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೂಡಲೇ ನಿರ್ದೇಶಕರನ್ನು ವಜಾಗೊಳಿಸಿ ಬ್ಯಾಂಕಿಂಗ್ ನೇಮಕಾತಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.