ಮೇ 15 ಸಾಮೂಹಿಕ ವಿವಾಹ / ಹೆಸರು ನೊಂದಾಯಿಸಿಕೊಳ್ಳಲು ಮನವಿ

ಶಹಾಪುರ,,

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಲಕ್ಷ್ಮೀನಾರಾಯಣ ನಾಗವಾರ ಬಣ)  ವತಿಯಿಂದ ತಾಲೂಕಿನ ಭೀ,ಗುಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮೇ 15 ರಂದು
ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು,
ವಿವಾಹ ಮಾಡಿಕೊಳ್ಳುವವರು ಹೆಸರು ನೊಂದಾಯಿಸಿ ಕೊಳ್ಳಬೇಕೆಂದು ಕಲಬುರ್ಗಿ ವಿಭಾಗಿಯ ಸಂಘಟನಾ ಸಂಚಾಲಕ ಹೊನ್ನಪ್ಪ ಗಂಗನಾಳ ತಿಳಿಸಿದರು.ಇಂದು ನಗರದ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಡತನದಲ್ಲಿ ಇರುವ ಜನರು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಮದುವೆ ಮಾಡಿ ಸಾಲ ಮಾಡಿಕೊಂಡು ಸಾಲ ತಿರಿಸಲು ಬೆಂಗಳೂರು, ಪುಣೆ ನಗರಕ್ಕೆ ಗುಳೆ ಹೋಗುವದನ್ನು ನೋಡುತ್ತೇವೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ಲಕ್ಷಾನುಗಟ್ಟಲೆ ಮದುವೆಗಾಗಿ ಹಣ ಖರ್ಚು ಮಾಡುವುದನ್ನು ತಡೆಯಬಹುದು. 25ಕ್ಕೂ ಹೆಚ್ಚು ಜೋಡಿಗಳ ಮದುವೆ ಮಾಡಬೇಕು ಎನ್ನುವ ಉದ್ದೇಶ ಹೊಂದಿಲಾಗಿದೆ.ಮರು ಮದುವೆ ಹಾಗೂ ಬಾಲ್ಯ ವಿವಾಹಕ್ಕೆ ಅವಕಾಶ ಇರುವುದಿಲ್ಲ ಎಂದರು.
  ಈ ಸಂದರ್ಭದಲ್ಲಿ ಕಲಬುರ್ಗಿ ವಿಭಾಗಿಯ ಸಂಘಟನಾ ಸಂಚಾಲಕ ಹೊನ್ನಪ್ಪ ರಸ್ತಾಪುರ,ಯಾದಗಿರಿ ಜಿಲ್ಲಾ ಸಂಚಾಲಕ ಗೋಪಾಲ್ ವಜ್ಜಲ್, ಸಂಘಟನಾ ಸಂಚಾಲಕ ಶಿವಶರಣ ಯಾಳಗಿ, ಹಿರಿಯರಾದ ಕಾಳಪ್ಪ ಕುಳಗೇರಿ, ಶಿವಣ್ಣ ವಕೀಲರು, ಮಾನಪ್ಪ ವಠಾರ,  ಶರಣಪ್ಪ ಭೂತಾಳಿ, ಮರೆಪ್ಪ ಸಲಾದಪೂರ,  ಪಂಡಿತ್ ಮಡ್ನಾಳ, ಸಿದ್ದಪ್ಪ ದಿಗ್ಗಿ, ಮಲ್ಲಪ್ಪ ಸಲ್ಲಾದಪುರ, ಅಂಬಲಪ್ಪ ನಾಗನಟಗಿ, ಭೀಮರಾಯ ಜೇಗರಿ, ಮಂಜುನಾಥ ಕೊಂಬಿನ್, ಶಿವಪ್ಪ ಕಂಬಾರ, ಮಹೇಶ ಭೂತಾಳಿ, ಮರೆಪ್ಪ ಮುಂಡಾಸ ಸೇರಿದಂತೆ ಇತರರು ಇದ್ದರು.
ಮದುವೆ ನೋಂದಣಿಗಾಗಿ ಇವರನ್ನು ಸಂಪರ್ಕಿಸಿ.ಶರಣಪ್ಪ ಭೂತಾಳಿ ಸುರಪುರ-9980792397,
6361774809, ಹಣಮಂತ ಭದ್ರಾವತಿ-9611916658,
ಕೆಂಭಾವಿ ಹೋಬಳಿ, 
ಮಂಜು ಕೊಂಬಿನ 9535366048,
ಹುಣಸಗಿ ಗುರುಪುತ್ರ 
7353632645,
ಜೇವರ್ಗಿ ವಿಶ್ವಾರಾಧ್ಯ 
9945832519,
ಯಡ್ರಾಮಿ ಸಂಗಮೇಶ 
9902972843
ವಡಗೇರಾ ಪರಶುರಾಮ ಗೊಂದೆನೂರ 
9980383156