ಕುತ್ತಿಗೆಗೆ ಸೀರೆ ಬೀಗಿದು ಉಸಿರುಗಟ್ಟಿಸಿ ಯುವಕನ ಕೊಲೆ

ಮೃತ ಸಚೀನ್ ಮುರುಕುಂದಾ

ಶಹಾಪುರ:ಜೇವರ್ಗಿ ತಾಲುಕಾ ವ್ಯಾಪ್ತಿಯಲ್ಲಿ ಬರುವ ದಂಡ ಸೊಲ್ಲಾಪುರ ಗ್ರಾಮದ ಯುಕನೊರ್ವನಿಗೆ ಚಾಮನಾಳ ಸಮೀಪದಲ್ಲಿ ಕುತ್ತಿಗೆಗೆ ಸೀರೆ ಬೀಗಿದು ಉಸಿರು ಕಟ್ಟಿಸಿ ಕೊಲೆ ಮಾಡಿದ ಘಟನೆ ನಡೆದಿದ್ದು, ಸಚೀನ್ ಮುರುಕುಂದಾ [28] ಯುವಕ ದಂಡ ಸೊಲ್ಲಾಪುರ ಬಸ್ ನಿಲ್ದಾಣದಲ್ಲಿ ಪಂಚರ್ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದ್ದು, ಅವಿವಾಹಿತನಾದ ಸಚೀನ್,ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರನಿದ್ದಾನೆ.

ಸೋಮವಾರ ಮ.11 ಗಂಟೆಯ ಸುಮಾರಿಗೆ ಅಂಗಡಿಗೆ ಬಂದ ಸಚೀನ್ 2 ಗಂಟೆಯಾದರೂ ಅಂಗಡಿಯಿಂದ ಮನೆಗೆ ಬಾರದೆ ಕಾಣೆದಾಗಿದ್ದನು!. ಚಾಮನಾಳ ಸೀಮಾದ ಪಾದ್ರಿಯವರ ಜಮೀನಿನಲ್ಲಿ ಕುತ್ತಿಗೆಗೆ ಸೀರೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೋಲಿಸ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಎಸ್.ಪಿ, ಡಾ,ಸಿಬಿ,ವೇಧಮೂರ್ತಿ ಸಿಪಿಐ ಚೆನ್ನಯ್ಯ ಹೀರೆಮಠ ಗೋಗಿ ಠಾಣಾ ಪಿಎಸ್,ಐ ಅಯ್ಯಪ್ಪ ಭೀ,ಗುಡಿ,PSI,. ಸಂತೋಷ ರಾಠೋಡ್ ಆಗಮಿಸಿ ವಿಚಾರಣೆ ಕಾರ್ಯಕೈಗೊಂಡಿದ್ದಾರೆ. ಅರೋಪಿಗಳ ಪತ್ಯೆಗಾಗಿ ವ್ಯಾಪಕಜಾವ ಬೀಸಿದ್ದು ತನಿಖೆ ಮುಂದುವರೆದಿದೆ. ಗೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *