ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ : ರಾಜ್ ಮೈನುದ್ದೀನ ಜಮಾದಾರ

ಬಾಗಲಕೋಟೆ,,

ನಾಳೆ(ಏ.09) ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಯ ಮತದಾನ ನಡೆಯಲಿದ್ದು ನಿನ್ನೆ ಸಾಯಂಕಾಲ ಬಹಿರಂಗ ಪ್ರಚಾರದ ಅಂತ್ಯವಾಗಿದ್ದು, ಇಂದು ಮನೆಮನೆಗೆ ಹೋಗಿ ಅಭ್ಯರ್ಥಿಗಳು ಮತದಾರರ ಮನವೊಲಿಸುತ್ತಿದ್ದಾರೆ. ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಉಮೇಶ ಮೇಟಿಯವರ ಪರ ಯಾದಗಿರಿ ಜಿಲ್ಲೆಯ ರಾಜ್ಯ ಸಂಯೋಜಕರಾದ ರಾಜ್ ಮೈನುದ್ದೀನ್ ಜಮಾದಾರ್ ಅವರು ಅಭ್ಯರ್ಥಿಯ ಒಡಗೂಡಿ ಪ್ರತಿ ಮನೆಮನೆಗೂ  ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಪರ ಯೋಜನೆಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರ ಗಮನಕ್ಕೆ ತಂದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಮನವೊಲಿಸುತ್ತಿರುವುದು ಬಾಗಲಕೋಟೆಯ ವಿವಿಧ ವಾರ್ಡಗಳಲ್ಲಿ  ಕಂಡುಬಂದಿದ್ದು,ಬಾಗಲಕೋಟೆಯಲ್ಲಿ ಗೆಲ್ಲಲೆಬೇಕೆಂಬ ಹುಮ್ಮಸ್ಸಿನಿಂದ ಸಂಯೋಜಕರಾದ ರಾಜ್ ಮೈನುದ್ದೀನ್ ಅಬ್ಬರದ ಪ್ರಚಾರ ಕೈಗೊಳ್ಳುವ ಜೊತೆಗೆ ಮನೆಮನೆಗೂ ಮತದಾರರ ಹೋಲೈಕೆಯಲ್ಲಿ ತೊಡಗಿದ್ದಾರೆ.

ಬಡವರ ದೀನ ದಲಿತರ ಅಲ್ಪಸಂಖ್ಯಾತರ ಪರ ಕಾಂಗ್ರೆಸ್ ಪಕ್ಷವಿದ್ದು ಸ್ವಾತಂತ್ರ್ಯ ಬಂದಿನಿಂದಲೂ ಕೂಡ ಹಲವು ಯೋಜನೆಗಳು ಕಾಂಗ್ರೆಸ್ ಪಕ್ಷ ಬಡವರ ಪರ ಯೋಜನೆಗಳಾಗಿವೆ. ಮತದಾರರು ಕಾಂಗ್ರೆಸ್ ಪಕ್ಷದ ಕೈಬಿಡುವುದಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮರ್ಥವಾದ ಆಡಳಿತ ನಡೆಸಿದ್ದು,ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದು ಬೈಕ್ ಪ್ರಚಾರ ರ್ಯಾಲಿ ಕೈಗೊಂಡಿದ್ದು ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷ ಬಾಗಲಕೋಟೆ ಕ್ಷೇತ್ರದಲ್ಲಿ ಗೆಲ್ಲುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.