ಸಂಗಮೇಶ್ವರ ಮತ್ತು ಸ್ವಯಂಭೋ ಸೋಮೇಶ್ವರ ಜಾತ್ರಾ ಮಹೋತ್ಸವ

* ಸಾವಿರಾರು ಭಕ್ತರ ನಡುವೆ ಜಗಜ್ಯೋತಿ ಬಸವೇಶ್ವರ ಭವ್ಯ ರಥೋತ್ಸವ

ಕೆಂಭಾವಿ , ಫೆ.27,

ಸುರಪುರ ತಾಲೂಕಿನ ಏವೂರ ಗ್ರಾಮದ ಸಂಗಮೇಶ್ವರ ಮತ್ತು ಸ್ವಯಂಭೋ ಸೋಮೇಶ್ವರ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಭವ್ಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತೀ ವಿಜೃಂಬಣೆಯಿಂದ ರಥೋತ್ಸವ ಜರುಗಿತು.ರಥೋತ್ಸವದ ಹಿನ್ನಲೆ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪಲ್ಲಕ್ಕಿಯ ಸೇವೆ ಜರುಗಿತು. ರಥಕ್ಕೆ ಹೂಗಳಿಂದ ಅಲಂಕರಿಸಲಾಗಿತ್ತು. ಸಂಜೆ ನಡೆದ ರಥೋತ್ಸವಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಮಂಡಳ ಎಸೆದು ಸ್ವಯಂ ಬೋ ಸೋಮೇಶ್ವರ ಮತ್ತು ಸಂಗಮೇಶ್ವರ ಪರಾಕ್ ಅಂತ ಘೋಷಣೆ ಕೂಗುತ್ತಾ ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆದರು.ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು, ಬಸ್ಸು ಹೂಗಾರ ಸೇರಿದಂತೆ ಭಕ್ತರು ಗ್ರಾಮಸ್ಥರು ಸೇರಿದಂತೆ ಸಹಸ್ರಾರು ಜನರು ಜಾತ್ರೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *