ಉಪ ಚುನಾವಣಾ ಉಸ್ತುವಾರಿಯಾಗಿ ನಿಖಿಲ್ ವಿ ಶಂಕರ ನೇಮಕ

ಶಹಾಪುರ,,

ರಾಜ್ಯದಲ್ಲಿ ದಾವಣಗೆರೆ ಮತ್ತು ಬಾಗಲಕೋಟೆಯ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೆರುತ್ತಿದೆ. ಏಪ್ರಿಲ್ ಒಂಬತ್ತರಂದು ನಡೆಯುವ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಸಜ್ಜಾಗಿದ್ದು ಪಕ್ಷದ ಅಭ್ಯರ್ಥಿಗಳಾಗಿ ದಾವಣಗೆರೆಯಿಂದ ಸಮರ್ಥ ಬಾಗಲಕೋಟೆಯಿಂದ ಉಮೇಶ ಮೇಟಿಯವರು ಸ್ಪರ್ಧಾ ಕಣದಲ್ಲಿದ್ದು ಶತಾಯಗತಾಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲೇಬೇಕೆಂದು ಚುನಾವಣಾ ಕಣಕ್ಕೆ ಧುಮುಕಿದ್ದು ಕೆಪಿವೈಸಿ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ನಿಖಿಲ್ ವಿ ಶಂಕರ್ ಅವರನ್ನು ಬಾಗಲಕೋಟೆ ಉಪಚುನಾವಣೆಗೆ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಯುವ ಘಟಕದ ಅಧ್ಯಕ್ಷರಾದ ಮಂಜುನಾಥ ಆದೇಶಿಸಿದ್ದಾರೆ. ಕಾಂಗ್ರೆಸ್ ಪಕ್ಷ ನನ್ನನ್ನು ಬಾಗಲಕೋಟೆ ಉಪಚುನಾವಣೆ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದು ಮುಖ್ಯಮಂತ್ರಿಗಳ ಆದೇಶ ಉಪಮುಖ್ಯಮಂತ್ರಿಗಳು ಹಾಗೂ ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರ ಆದೇಶದನ್ವಯ ಬಾಗಲಕೋಟೆ ಕ್ಷೇತ್ರದಲ್ಲಿ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡು ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕರಿಸುವುದಾಗಿ ನಿಖಿಲ್ ವಿ ಶಂಕರ್ ತಿಳಿಸಿದ್ದಾರೆ.