ಅಮಾನತುಗೊಂಡ ವಸತಿ ನಿಲಯ ಮೇಲ್ವಿಚಾರಕನನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ಆಗ್ರಹ 

ಶಹಾಪುರ,

ಕರ್ತವ್ಯ ನಿರ್ಲಕ್ಷತೆ, ಅಸಮರ್ಪಕ ಕಾರ್ಯನಿರ್ವಹಣೆ,ಬೇಜವಾಬ್ದಾರಿತನದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಂಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕ(ವಾರ್ಡ್ ನ್) ಗೊಲ್ಲಾಳಪ್ಪ ಅವರನ್ನು ನಗರದ ಬಸವೇಶ್ವರ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕನನ್ನಾಗಿ ನೇಮಿಸಲಾಗಿದೆ. ಅಮಾನತ್ತುಗೊಂಡ ಈ ಅಧಿಕಾರಿಯನ್ನು ಯಾದಗಿರಿ ಜಿಲ್ಲೆಯಿಂದಲೇ ತೆರವುಗೊಳಿಸಿ ಅನ್ಯ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಪ್ರದೀಪ್ ಅಣಬಿ ಆಗ್ರಹಿಸಿದ್ದಾರೆ.

 

ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಗೊಲ್ಲಾಳಪ್ಪ ಈ ಮೊದಲು ಇದೇ ವಸತಿ ನಿಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗೋಗಿ ಪಿ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕರ್ತವ್ಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದ ಹಿನ್ನೆಲೆಯಲ್ಲಿ ಗೊಲ್ಲಾಳಪ್ಪ ಅವರನ್ನು ಅಮಾನತ್ತು ಮಾಡಲಾಗಿತ್ತು. ಮೇಲಾಧಿಕಾರಿಗಳ ಆದೇಶದಂತೆ ಪುನಹ ಬಸವೇಶ್ವರ ನಗರದ ವಸತಿ ನಿಲಯಕ್ಕೆ ಮೇಲ್ವಿಚಾರಕನನ್ನಾಗಿ ನೇಮಿಸಲಾಗಿದೆ. ಅಮಾನತ್ತುಗೊಂಡವರು ಜಿಲ್ಲೆಗೆ ವರ್ಗಾವಣೆಗೆ ಗೊಳಿಸಬಾರದು ಎಂದು ಪ್ರದೀಪ್ ಅಣಬಿ ಆರೂಪಿಸಿದ್ದಾರೆ. ಈತನನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ಆದೇಶದಂತೆ ಮೇಲ್ವಿಚಾರಕ ಗೊಲ್ಲಾಳಪ್ಪ ಅವರನ್ನು ವಡಗೇರ ತಾಲೂಕಿನ ಕೊಂಕಲ್ ವಸತಿ ನಿಲಯಕ್ಕೆ ವರ್ಗಾಯಿಸಲಾಗಿತ್ತು. ಗೊಲ್ಲಾಳಪ್ಪನವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಶಹಪುರ ತಾಲೂಕಿನಲ್ಲಿರುವ ಬಸವೇಶ್ವರ ನಗರದಲ್ಲಿನ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ತಾಲೂಕು ಹಿಂದುಳಿದ ವರ್ಗಗಳ ತಾಲೂಕಾಧಿಕಾರಿ ಚನ್ನಬಸಪ್ಪ ಚೌದ್ರಿ ತಿಳಿಸಿದರು.