ಖಾನಾಪುರ ಕೆರೆಗೆ ತಡೆಗೋಡೆ ನಿರ್ಮಿಸುವಂತೆ ಒತ್ತಾಯ

ಶಹಾಪುರ,

ತಾಲೂಕಿನ ಖಾನಾಪುರ ಗ್ರಾಮದ ಕೆರೆಗೆ ತಡೆಗೋಡೆ ನಿರ್ಮಿಸುವಂತೆ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಜಿಲ್ಲಾಧ್ಯಕ್ಷ ಶರಣಪ್ಪ ಕೃಷ್ಣಪ್ಪನೋರ ಒತ್ತಾಯಿಸಿದ್ದಾರೆ.ಖಾನಾಪುರದಿಂದ ತಾಲೂಕು ಕೇಂದ್ರ ವಡಗೇರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಗ್ರಾಮಕ್ಕೆ ಮತ್ತು ಮುಖ್ಯ ರಸ್ತೆಗೆ ಅತ್ಯಂತ ದೊಡ್ಡದಾದ ಕೆರೆಯನ್ನು ಹೊಂದಿದೆ. ದಿನನಿತ್ಯ ಸಾವಿರಾರು ವಾಹನ ಸವಾರರು  ಇದೇ ರಸ್ತೆಯ ಮೂಲಕ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಾರೆ. ಈ ಹಿಂದೆ ಇದೆ ರಸ್ತೆಯಲ್ಲಿ ಅಹಿತಕರ ಘಟನೆಗಳು ನಡೆದಿವೆ. ವಾಹನ ಸವಾರರು ಕೆರೆಯಲ್ಲಿ ಬಿದ್ದ ಉದಾಹರಣೆಗಳಿವೆ. ಚಿಕ್ಕ ಮಕ್ಕಳು ಜನ ಜಾನುವಾರುಗಳು ಅದೆಷ್ಟೋ ಬಾರಿ ಅಪಾಯದಿಂದ ಪಾರಾಗಿದ್ದಾರೆ. ಇದೇ ರಸ್ತೆಯ ಮೂಲಕ ಜನ ಪ್ರತಿನಿಧಿಗಳು ಅಧಿಕಾರಿಗಳು ಓಡಾಡುತ್ತಾರೆ. ಆದರೆ ಜನರ ಸುರಕ್ಷತೆಗಾಗಿ ತಡಗೋಡೆ ನಿರ್ಮಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಖಾನಾಪುರ ಗ್ರಾಮದ ಕೆರೆಗೆ ತಡೆಗೂಡೆ ನಿರ್ಮಿಸಬೇಕು. ನಿರ್ಲಕ್ಷ ವಹಿಸಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ‌ ತಿಳಿಸಿದರು.ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ರಾಮಕೃಷ್ಣ ಪೂಜಾರಿ, ದೇವರಾಜ ಕುರಕುಂದಿ, ಭೀಮರಾಯ ಅರ್ಜುನಗಿ, ಚಂದ್ರಶೇಖರ ಹೊಸಬಾವಿ, ಬಸ್ಸು ಹಳಿಮನಿ, ಶರಣಪ್ಪ ಕಾಡುಮನೋರ, ಸಾಹೇಬಗೌಡ ಖಾನಾಪೂರ, ಸಾಬಣ್ಣ ಕಾಮಣ್ಣೊರ, ಮಾಳಪ್ಪ, ವಿಜಯಕುಮಾರ ಖಾನಾಪೂರ, ಹಳ್ಳೆಪ್ಪ ಎಲೇರಿ,ಮೈಬೂಬ್ ಗಿಡದೊರ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *