ಬಾಬಾ ಸಾಹೇಬರ 135 ನೇ ಜಯಂತೋತ್ಸವ | ಪೂರ್ವಭಾವಿ ಸಭೆ | ಸಮಿತಿ ರಚನೆ

ಶಹಾಪುರ,

ಏಪ್ರಿಲ್ 14ರಂದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರ 135 ನೇ ಜಯಂತೋತ್ಸವ ಅಂಗವಾಗಿ ನಗರದ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಭೀಮರಾಯ ತಳವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಶ್ರೀಶೈಲ್ ಹೊಸಮನಿ, ಶಿವಕುಮಾರ ತಳವಾರ, ಶಿವಪುತ್ರ ಜವಳಿ, ನಾಗಣ್ಣ ಬಡಿಗೇರ ಸೇರಿದಂತೆ ಹಿರಿಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಬಾಬಾ ಸಾಹೇಬರ ಜಯಂತಿಯನ್ನು ನಗರದಲ್ಲಿ ಅದ್ದೂರಿಯಾಗಿ ನಡೆಸುವ ನಿಮಿತ್ತ ಸಮಿತಿಯನ್ನು ರಚಿಸಲಾಯಿತು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶರಣಪ್ಪ ಸಲಾದಪುರ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಾಜು ಅಣಬಿ, ಕಾರ್ಯಾಧ್ಯಕ್ಷರಾಗಿ ರಾಹುತಪ್ಪ ನಾಟೇಕರ, ಶಾಂತಪ್ಪ ಸಾಲಿಮನಿ, ಉಪಾಧ್ಯಕ್ಷರಾಗಿ ಸಂಗಪ್ಪ ದೊಡ್ಡಮನಿ, ಗುರುಲಿಂಗಪ್ಪ ಸಾಗರ, ಪ್ರಧಾನ ಕಾರ್ಯದರ್ಶಿಯಾಗಿ ಶಿವಪುತ್ರ ಜವಳಿ, ಕಾರ್ಯದರ್ಶಿಯಾಗಿ ನಾಗರಾಜ ಬೊಮ್ಮನಹಳ್ಳಿ, ಜಂಟಿ ಕಾರ್ಯದರ್ಶಿಯಾಗಿ ಶಿವಣ್ಣ ರಾಖಂಗೇರ, ಶರಬಣ್ಣ ದೋರನಹಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ನಿಂಗಪ್ಪ ದೊಡ್ಡಮನಿ, ಖಜಾಂಚಿಯಾಗಿ ಜಯರೆಡ್ಡಿ ದೊಡ್ಮನಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ಮುಖಂಡರು ಸೇರಿದಂತೆ ನೌಕರರು ಗುತ್ತಿಗೆದಾರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *