ರೈತೋದಯ ಹಸಿರುಸೇನೆ ಜಿಲ್ಲಾಧ್ಯಕ್ಷರಾಗಿ ಶರಣಪ್ಪ ನೇಮಕ

ಯಾದಗಿರಿ:

ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಶರಣಪ್ಪ ಕೃಷ್ಟಪ್ಪನೋರ್ ಖಾನಾಪೂರ ನೇಮಕಗೊಂಡಿದ್ದಾರೆ.
ಬೆಂಗಳೂರಿನ ಚೇತನ ಇಂಟರನ್ಯಾಷನಲ್ ಹೊಟೆಲ್ ನಲ್ಲಿ ಜರುಗಿದ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿ ಟಿ. ಚಂದ್ರಶೇಖರ ನೇಮಕದ ಆದೇಶ ಪತ್ರ ನೀಡಿ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದ್ದಾರೆ.ರೈತರ ಜ್ವಲಂತ ಸಮಸ್ಯೆಗಳ ವಿರುದ್ಧ ಹೊರಾಟ ಹಮ್ಮಿಕೊಂಡು, ರೈತರ ಏಳ್ಗೆಗಾಗಿ ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿ. ತಮ್ಮ ಬೆಂಬಲಕ್ಕೆ ರಾಜ್ಯ ಘಟಕ ಸದಾ ಕಾಲ ಇರುತ್ತದೆ. ಜಿಲ್ಲೆಯಾದ್ಯಂತ ನಮ್ಮ ಸಂಘಟನೆಯನ್ನು ಬಲಪಡಿಸುವಂತೆ‌ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮಹೇಶ ಬನ್ನೆಟ್ಟಿ, ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ರಾಮಕೃಷ್ಣ ಪೂಜಾರಿ, ಯಾದಗಿರಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರುದ್ರಾಂಬಿಕಾ ಆರ್. ಪಾಟೀಲ್, ದೇವರಾಜ ಕುರಕುಂದಿ, ಚಂದ್ರಶೇಖರ ಹೊಸಬಾವಿ, ಸಾಹೇಬಗೌಡ ಖಾನಾಪೂರ, ವಿಜಯಕುಮಾರ ಖಾನಾಪೂರ, ಸೋಪಣ್ಣ ಹಳಿಸಗರ, ಸಂಗಣ್ಣಗೌಡ ದೋರನಳ್ಳಿ,ಭೀಮು ಕಾಡಮಗೇರಿ ಸೇರಿದಂತೆ ಇನ್ನಿತರರು.

Leave a Reply

Your email address will not be published. Required fields are marked *