ಭೂಮಿ-ವಸತಿ-ನಿವೇಶನ-ಸ್ಮಶಾನಕ್ಕಾಗಿ ಸಚಿವರಿಗೆ ಮನವಿ

ಶಹಾಪುರ,
ಯಾದಗಿರಿ ಜಿಲ್ಲೆಯಾದ್ಯಂತ ದಲಿತರ ಕುಟುಂಬಗಳಿಗೆ ಭೂಮಿ ವಸತಿ ಸ್ಮಶಾನಗಳನ್ನು ಒದಗಿಸಿ ಕೊಡಬೇಕೆಂದು ಕರ್ನಾಟಕ ದಲಿತ ಸಂಘರ್ಷ(ಸಂಯೋಜಕ) ಸಮಿತಿ ವತಿಯಿಂದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಿ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ಸಚಿವದ್ವಯರ ಸಮ್ಮುಖದಲ್ಲಿ  ಜಿಲ್ಲೆಯಲ್ಲಿ ದಲಿತ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಸಂಘಟನೆಗಿಂತ ಮನವಿ ಮಾಡಿದರು. ಇಲ್ಲದಿದ್ದರೆ ನಿರಂತರ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷರಾದ ಶರಣರೆಡ್ಡಿ ಹತ್ತಿಗೂಡೂರು ಸಕಾರಾತ್ಮಕವಾಗಿ ಸಚಿವರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ.ಆರ್ ಅಶ್ವತ್ ಅಂತೇಜ, ರಾಜ್ಯ ಸಮಿತಿ ಸದಸ್ಯರಾದ ಎಂ ರವಿಕುಮಾರ್ ಗಂಗನಬೀಡು,ಶರಣಪ್ಪ ಚಲವಾದಿ, ಸಿದ್ದಪ್ಪ ಹೊಸ್ಮನಿ, ಮಲ್ಲಮ್ಮ, ಬಸಲಿಂಗಮ್ಮ, ಶರಣಮ್ಮ, ಭೀಮಬಾಯಿ,ಗಂಗಮ್ಮ,ಶರಣಮ್ಮ, ಎಲ್ಲಮ್ಮ,ಪ್ರಿಯಾ,ಮಲ್ಲಮ್ಮ, ಜೇಜಮ್ಮ, ಚಲವಾದಿ,ಸಿದ್ದಲಿಂಗಮ್ಮ,ಲಕ್ಷ್ಮಿ ಹೊಸಮನಿ,ಮರಿಯಮ್ಮ ಬಿಬಿಎಂಪಿ, ಮಾಳಮ್ಮ,ತಂಗಮ್ಮ ಸೇರಿದಂತೆ ನೂರಾರು ಮಹಿಳೆಯರು ಸಂಘಟನಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *