ಶಹಾಪುರ,,
2025-26 ರಿಂದ 2030ರ ಐದು ವರ್ಷಗಳ ಅವಧಿಗೆ ಶಹಾಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಿ)ಗೆ ಮಂಗಳವಾರ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ 14 ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಯಾದರು.ನೂತನವಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನಿರ್ದೇಶಕರ ಪ್ರಮುಖರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಮಹಾಂತಪ್ಪ ಚಂದಾಪೂರ, ಪ್ರಭುಗೌಡ ಪಾಟೀಲ್ ಹಬಸಿಹಾಳ, ಸಿದ್ದಲಿಂಗರೆಡ್ಡಿ ಹತ್ತಿಗುಡೂರ, ಮಲ್ಲಣ್ಣಗೌಡ ಸಿಂಗನಹಳ್ಳಿ, ಮಲ್ಲಣ್ಣಗೌಡ ರೊಟ್ನಡಗಿ, ರಾಜುಗೌಡ ನಗನೂರ, ಅಂಬರೇಶ ವಿಭೂತಿಹಳ್ಳಿ, ಬಸವರಾಜ ವಿಭೂತಿಹಳ್ಳಿ, ಅಡಿವೆಪ್ಪ ಜಾಕಾ, ರಾಮಣ್ಣ ಸಾದ್ಯಾಪೂರ, ಶರಣಗೌಡ ಇಟಗಿ, ಶಣ್ಮುಕಪ್ಪ ದೋರನಹಳ್ಳಿ ಮತ್ತು ಹುಸೇನಸಾಬ ಕುರಾನಬುಡ್ಡಿ ದೋರನಹಳ್ಳಿ ಇತರರಿದ್ದರು.
ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರು.
ರಾಯಪ್ಪಗೌಡ ಸಾಹೇಬಗೌಡ
ದರ್ಶನಾಪೂರ, (ಸಾಲಗಾರರಲ್ಲದ ಕ್ಷೇತ್ರ),ಶಾಂತಗೌಡ ಸಂಗನಗೌಡ
ಸಾದ್ಯಾಪೂರ (ಸಾಮಾನ್ಯ ಸಾಲಗಾರರ ಕ್ಷೇತ್ರ ಮೂಡಬುಳ),
ಖಂಡಪ್ಪ ಮಲ್ಲಪ್ಪ ಗುಂಡಗುರ್ತಿ (ಹಿಂದುಳಿದ ವರ್ಗ ‘ಬ’ ಕಾಡಂಗೇರಾ ಬಿ),
ಮೋಹನರೆಡ್ಡಿ ಶರಣಪ್ಪಗೌಡ ಗೋಗಿ (ಸಾಮಾನ್ಯ ಸಾಲಗಾರರ ಕ್ಷೇತ್ರ ಗೋಗಿ),
ಮರಿಗೌಡ ಬಸವರಾಜಪ್ಪ
ಬಬಲಾದ (ಸಾಮಾನ್ಯ ಸಾಲಗಾರರ ಕ್ಷೇತ್ರ ವಡಗೇರಾ ಬಿ), ಜಗನ್ನಾಥರೆಡ್ಡಿ ಬಸವಂತ್ರಾಯ ರೊಟ್ನಡಗಿ
(ಸಾಮಾನ್ಯ ಸಾಲಗಾರರ ಕ್ಷೇತ್ರ ಬೆಂಡಬೆಂಬಳಿ),
ಸಿದ್ದಲಿಂಗಪ್ಪಗೌಡ ಚಂದಣ್ಣಗೌಡ ಹಬ್ಬಳ್ಳಿ
(ಸಾಮಾನ್ಯ ಸಾಲಗಾರರ ಕ್ಷೇತ್ರ ಶಿರವಾಳ), ಶರಣಗೌಡ
ಭೀಮಪ್ಪಗೌಡ ಬೀರನೂರ
(ಸಾಮಾನ್ಯ ಸಾಲಗಾರರ ಕ್ಷೇತ್ರ ಹೈಯಾಳ ಬಿ),
ಬಸವರಾಜ ಶರಣಪ್ಪ ಕುರಕುಂದಿ (ಸಾಮಾನ್ಯ ಸಾಲಗಾರರ ಕ್ಷೇತ್ರ ಖಾನಾಪೂರ), ಭಾಗಣ್ಣ ಮಹಾಂತಪ್ಪ ದೋರನಹಳ್ಳಿ
(ಹಿಂದುಳಿದ ವರ್ಗ ‘ಆ’ ದೋರನಹಳ್ಳಿ), ಗುರುನಾಥ ದೇವಿಂದ್ರಪ್ಪ ಬಾಣತಿಹಾಳ
(ಪರಿಶಿಷ್ಟ ಜಾತಿ ಚಾಮನಾಳ),
ಹಣಮಂತ್ರಾಯ ಮಹಾದೇವಪ್ಪ ವನದುರ್ಗ
(ಪರಿಶಿಷ್ಟ ಪಂಗಡ ವನದುರ್ಗ), ಬಸಮ್ಮ
ಮರೆಪ್ಪ ಹಳಿಸಗರ
(ಮಹಿಳಾ ಮೀಸಲು ಶಹಾಪುರ), ರಾಯಮ್ಮ
ವಿಭೂತಿಹಳ್ಳಿ (ಮಹಿಳಾ ಮೀಸಲು ಸಗರ).