ಕಾಮಗಾರಿ ಕಳಪೆ ತನಿಖೆಗೆ ಆಗ್ರಹ

ಶಹಾಪುರ,,

ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯವು ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದ್ದು ತನಿಖೆ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಸಂಯೋಜಕ ಬಾಣ) ಜಿಲ್ಲಾ ಸಮಿತಿ ಅಧ್ಯಕ್ಷರಾದ ಶರಣರೆಡ್ಡಿ ಹತ್ತಿಗುಡೂರು ಆಗ್ರಹಿಸಿದ್ದಾರೆ.ತಾಲೂಕಿನ ಕೊಂಗಂಡಿ ಎಸ್ ಗ್ರಾಮದಲ್ಲಿನ 2024-25 ನೇ ಸಾಲಿನ KKRDB/ಅಕ್ಷರ ಆವಿಷ್ಕಾರ (ಮೈಕ್ರೋ) ಯೋಜನೆಯಡಿಯಲ್ಲಿ ಮಂಜೂರಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕಟ್ಟಡ ದುರಸ್ತಿ‌,ಕುಡಿಯುವ ನೀರಿನ ವ್ಯವಸ್ಥೆ,ನೀರು ಸಂಗ್ರಹಣ ಟ್ಯಾಂಕ್ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿವೆ. ಸಂಬಂಧ ಪಟ್ಟ ಜೆಇ ಅವರನ್ನು ಅಮಾನತುಗೊಳಿಸಬೇಕು. ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ  ವಿಶ್ವ ಚಲವಾದಿ ಇದ್ದರು.

Leave a Reply

Your email address will not be published. Required fields are marked *