ಕೆ.ಬಿ.ರಾಜು,
ಭಾರತಕ್ಕೆ ಅವಿಸ್ಮರಣೀಯ ದಿನವೆಂದು, ಕಳೆದ ಬಾರಿ ವಿಶ್ವಕಪ್ ವಿಜೇತ ತಂಡವಾದ ಭಾರತ,2026 ರಲ್ಲಿಯು T-20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಂಜು ಸಮ್ಸಾನ್ (89) ಮತ್ತು ಇಶಾಂತ್ ಕಿಶನ್(54), ಅಭಿಷೇಕ್ ಶರ್ಮಾ (52)ಅವರ ಅದ್ಭುತ ಆಟದಿಂದ 255 ರನ್ ಗಳ ಬೃಹತ್ ಮೊತ್ತ ಪೇರಿಸಿ ನ್ಯೂಜಿಲೆಂಡ್ ತಂಡವನ್ನು 96 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸತತ ಎರಡು ಬಾರಿ ಚಾಂಪಿಯನ್ನಾಗಿ ಭಾರತ ತಂಡ ಹೊರಹೊಮ್ಮಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 255 ರನ್ ಗಳ ಬೃಹತ್ ಮತ್ತು ಪೇರಿಸಿದ ಭಾರತ ನ್ಯೂಜಿಲೆಂಡ್ ತಂಡವನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 156 ರನ್ಗಳಿಗೆ ಆಲ್ ಔಟ್ ಮಾಡಿತು. ಭಾರತದ ಪರ ಬೂಮ್ರಹ 15 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದು ಭಾರತದ ಗೆಲುವಿಗೆ ಕಾರಣಿಭೂತರಾದರು.ಮೂರು ಭಾರೀ ಭಾರತ T-20 ವಿಶ್ವಕಪ್ ಗೆದ್ದ ಏಕೈಕ ವಿಜೇತ ತಂಡವಾಗಿದೆ.
man of the match = jasprit Bumrah..