ಬಿಸಿ ಊಟದ ಕೋಣೆಯ ಚಾವಣಿ ಕುಸಿತ, ಅಡುಗೆ ಸಹಾಯಕಿ ತಲೆಗೆ ಗಾಯ

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹಣಮಂತ ದೊಡ್ಮನಿ 

ವಡಗೇರ,,

ತಾಲೂಕಿನ ಯಕ್ಷಿಂತಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಿಸಿ ಊಟದ ಕೋಣೆಯ ಚಾವಣಿ ಕುಸಿದು ಅಡುಗೆ ಸಹಾಯಕಿ ನೀಲಮ್ಮ ಅವರಿಗೆ ತಲೆಗೆ ಪೆಟ್ಟಾಗಿದ್ದು  ಕೂಡಲೆ ಬಿಸಿ ಊಟದ ಕೋಣೆಯ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹಣಮಂತ ದೊಡ್ಮನಿ  ಅಧಿಕಾರಿಗಳಿಗೆ ಮನವಿ ಮಾಡಿದರು.ಈ ಕಟ್ಟಡ ನಿರ್ಮಿಸಿ  ೩೦ ವರ್ಷಗಳು ಕಳೆದಿರಬಹುದು. ಗೋಡೆಯು ಸೀಳಿ ನಿಂತಿದೆ. ಚಾವಣಿ ಕುಸಿಯುತ್ತಿದೆ. ಶಾಲೆಯ ನೂರಾರು ಮಕ್ಕಳಿಗೆ, ಅಡುಗೆ ಮಾಡುವ ಅಡುಗೆ ಸಹಾಯಕಿಯರಿಗೆ ತುಂಬಾ ಭಯವಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕಟ್ಟಡ ವಿಕ್ಷೀಸಿ ಬಿಸಿಯುಟದ ಅಡುಗೆ ಕೋಣೆ ಮಂಜೂರು ಮಾಡಬೇಕೆಂದು ಪತ್ರಿಕೆಯ‌ ಮುಖಾಂತರ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕ್ಷೇತ್ರದ ಶಾಸಕರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *