ಕುರಿಗಾರರಿಗೆ ಜೀವ ತುಂಬಿದ ಜೀವ ವಿಮಾ ಯೋಜನೆ

ಕುರಿಗಾರರಿಗೆ ಜೀವ ತುಂಬಿದ ಜೀವ ವಿಮಾ ಯೋಜನೆ:ಶರಣು ತಳ್ಳಿಕೇರಿ

ಬೆಂಗಳೂರು:ರಾಜ್ಯಾದ್ಯಂತ ನೆಲೆಸಿರುವ ಕುರಿಗಾರರಿಗೆ ಪ್ರಸ್ತುತ ವರ್ಷದಿಂದ ಜಾರಿಗೆ ಬಂದಿರುವ ಜೀವ ವಿಮಾ ಯೋಜನೆಯು ಕುರಿಗಾಯಿಗಳಿಗೆ ಜೀವ ತುಂಬಿದಂತಾಗಿದೆ.ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ಕುರಿಗಾರರಿಗೆ ಸಾಲ ನೀಡುವ ಹಲವು ಯೋಜನೆಗಳು ಇದ್ದರೂ ಇಂತಹ ಮಹತ್ವದ ಯೋಜನೆಯನ್ನು ಜಾರಿಗೆ ತರುವ ಮತ್ತು ವಸತಿ ಮತ್ತು ವಿಮಾ ಯೋಜನೆಯ ಬಗ್ಗೆ ಯಾರೂ ಯೋಚಿಸಿರಲಿಲ್ಲ.

 

ವಲಸೆ ಮತ್ತು ಸ್ಥಳೀಯ ಗ್ರಾಮದಲ್ಲಿ ನೆಲೆಸಿರುವ ಕುರಿಗಾರರ ಜೀವಕ್ಕೆ ಬೆಲೆಕಟ್ಟುವವರಿರಲಿಲ್ಲ. ಆದರೆ ಪ್ರಸ್ತುತ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ತಳ್ಳಿಕೇರಿಯವರು ಮುಂದಾಲೋಚಿಸಿ, ಕುರಿಗಾರರಿಗಾಗಿಯೇ ಮಹತ್ವದ ವಿಮಾ ಯೋಜನೆ ಜಾರಿಗೆ ತಂದರು.ವರ್ಷಾದ್ಯಂತ ಕುರಿಗಾರರು ಗುಡ್ಡಗಾಡು ಪ್ರದೇಶಗಳಲ್ಲಿ ಓಡಾಡುತ್ತಾ ಚಳಿ-ಮಳೆ ಎನ್ನದೆ ಕುರಿಗಳನ್ನು ಮೇಯಿಸಲು ಹರ ಸಾಹಸ ಪಡುತ್ತಿದ್ದಾರೆ.ಮಳೆ-ಚಳಿಗೆ, ಗುಡುಗು-ಮಿಂಚಿಗೆ ಆಕಸ್ಮಿಕವಾಗಿ ಮೃತಪಟ್ಟರೆ ಅವರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿತ್ತು.ಇದನ್ನು ಮನಗಂಡ ಶರಣು ತಳ್ಳಿಕೇರಿ ಯವರು ವಿಮಾ ಯೋಜನೆಯನ್ನು ಜಾರಿಗೆ ತಂದರು.ವಿಮಾ ಯೋಜನೆಗೆ ಹಣ ಕಟ್ಟುವಂತಿಲ್ಲ.ಸಂಪೂರ್ಣ ಜವಾಬ್ದಾರಿ ಕರ್ನಾಟಕ ಕುರಿ ನಿಗಮವೆ ನೋಡಿಕೊಳ್ಳುತ್ತದೆ.ಮಳೆ-ಚಳಿ ಎನ್ನದೇ ಜೀವತೆತ್ತ ಕುರಿಗಳ ಜೊತೆಗೆ ಕುರಿಗಾರರಿಗೂ ಕೂಡ 5 ಲಕ್ಷ ಪರಿಹಾರ ಧನ ವಿಮೆಯ ಮೂಲಕ ಸಿಗುತ್ತದೆ. ಇದು ಕುರಿಗಾರರಿಗೆ ಅತ್ಯಂತ ಮಹತ್ವದ ಯೋಜನೆಯಾಗಿದೆ.

ನಿಗಮದಿಂದ ವಸತಿ ಯೋಜನೆ ಜಾರಿಗೆ

ಕುರಿಗಾರರ ಕಲ್ಯಾಣಕ್ಕಾಗಿ ವಲಸೆ ಕುರಿಗಾರರು ಮತ್ತು ಇತರ ಕುರಿಗಾರರಿಗೆ 500000 ವಸತಿ ನಿರ್ಮಿಸಿಕೊಳ್ಳಲು ವಸತಿ ಯೋಜನೆಯನ್ನು ನಿಗಮದ ಅಧ್ಯಕ್ಷರು ಶರಣು ತಳ್ಳಿಕೇರಿ ಜಾರಿಗೆ ತಂದರು. ಇದರಿಂದ ರಾಜ್ಯಾದ್ಯಂತ ಇಂದಿಗೂ ಕುರಿಗಾರರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ.ವಲಸೆ ಕುರಿಗಾರರು ವಲಸೆ ಹೋದ  ಸ್ಥಳದಲ್ಲಿಯೇ ಹಟ್ಟಿಗಳನ್ನು ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಇದನ್ನು ಕಣ್ಣಾರೆ ಕಂಡ ಶರಣು ಕೇರಿ  ಶಾಶ್ವತ ವಸತಿಗಾಗಿ ವಸತಿ ಯೋಜನೆಯನ್ನು ಜಾರಿಗೆ ತಂದರು. ಇದು ರಾಜ್ಯಾದ್ಯಂತ ಹಲವಾರು ಕುರಿಗಾರರಿಗೆ ವಸತಿ ಸಿಗುವಂತಾಗಿದೆ.

 

ಕುರುಬರ ಹೆಸರೇಳಿಕೊಂಡು ರಾಜಕೀಯ ಅನುಭವಿಸಿದವರು ಎಷ್ಟೋ ಜನರಿದ್ದಾರೆ. ಆದರೆ ರಾಜ್ಯದಲ್ಲಿ ಕುರುಬರಿಗೆ ಮತ್ತು ಕುರಿಗಾರರಿಗೆ ಅವರ ಕೊಡುಗೆ ಏನು ಇಲ್ಲ.ನಮ್ಮಿಂದ ಕುರುಬರಿದ್ದಾರೆ ಎನ್ನುವುದಕ್ಕಿಂತ ಕಾರ್ಯರೂಪದಲ್ಲಿ ಕುರಿಗಾರರಿಗೆ ಹಲವು ಸೌಲಭ್ಯಗಳನ್ನು ಒದಗಿಸಿಕೊಟ್ಟವರು ಶರಣು ತಳ್ಳಿಕೇರಿಯವರು

 ನಿಂಗಣ್ಣ ಶಹಾಪುರ 

 

 

About The Author