ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳು
**************
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕನಕದಾಸರ ಕೀರ್ತನೆಗಳ ಅರ್ಥವಿವರಣೆಯ ಮೂರನೆಯ ಕಾರ್ಯಕ್ರಮ
****************
ಕಾಗಿನೆಲೆ,,
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕನಕದಾಸರ ಐಕ್ಯಮಂಟಪದಲ್ಲಿ ಡಿಸೆಂಬರ್ 22 ರ ಸೋಮವಾರದಂದು ‘ ಲೋಕಗುರು ಕನಕದಾಸರ ಕೀರ್ತನೆಗಳ ಅರ್ಥಲೋಕ’ ಕಾರ್ಯಕ್ರಮದ ಮೂರನೇ ಅವತರಣಿಕೆ ನಡೆಯಿತು. ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರು ಕನಕದಾಸರ ‘ ಶಿವ ಶಿವ ಶಿವ ಎನ್ನಿರೊ’ ಕೀರ್ತನೆಗೆ ಅರ್ಥವಿವರಣೆ ನೀಡಿದರು.ಪ್ರಾಧಿಕಾರದ ಸಂಶೋಧಕರಾದ ಡಾ. ಜಗನ್ನಾಥ ಗೇನಣ್ಣನವರ್ ಕೀರ್ತನೆಯನ್ನು ಹಾಡಿದರು.
ಲೆಕ್ಕಾಧೀಕ್ಷಕರಾದ ಸಿ.ಬಿ.ಸಪ್ಪಿನ್ ಅವರ ಕನಕದಾಸರ ಕೀರ್ತನಾ ಸ್ತುತಿಗಾಯನದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಬಾಡದ ಸಿಬ್ಬಂದಿಯವರಾದ ಮಾರುತಿ ಕಟ್ಟೀಮನಿ ಸ್ವಾಗತಿಸಿದರೆ ಪ್ರಕಾಶ ಸಣ್ಣಬಸ್ಸಪ್ಪನವರ್ ವಂದಿಸಿದರು.ಮಹೇಶ ಗೊರವರ ಕಾರ್ಯಕ್ರಮ ನಿರೂಪಿಸಿದರು.ಪ್ರಾಧಿಕಾರದ ಫೋಟೋಗ್ರಾಫರ್ ವಿಜಯ್ ಬ್ಯಾಡಗಿ ಕಾರ್ಯಕ್ರಮ ಮಾಡಿದರು.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾಗಿನೆಲೆ ಮತ್ತು ಬಾಡದ ಸಿಬ್ಬಂದಿಯವರು ಮತ್ತು ಕನಕದಾಸರ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.