ತಡಿಬಿಡಿ ಜಿಲ್ಲಾ ಪಂಚಾಯತಿ ಕ್ಷೇತ್ರ ರದ್ದು::ಸುರಪುರ ಯಾದಗಿರಿ ರಸ್ತೆ ತಡೆದು ಪ್ರತಿಭಟಿಸಿದ ಗ್ರಾಮಸ್ಥರು

ಶಹಪುರ: ವಡಗೇರಾ ತಾಲೂಕಿನ ತಡಿಬಿಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ರದ್ದುಪಡಿಸಿ ಕುರುಕುಂದಿ ಜಿಪಂ. ಕ್ಷೇತ್ರವನ್ನಾಗಿ ಮಾಡಿರುವುದನ್ನು ಖಂಡಿಸಿ ಇಂದು ತಡಿಬಿಡಿ ಗ್ರಾಮದಲ್ಲಿ ಯಾದಗಿರಿ-ಸುರಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರಸ್ತುತ ಯಾದಗಿರಿ ಕ್ಷೇತ್ರದ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ ಅವರ ಭಾವಚಿತ್ರವನ್ನಿಡಿದು ಖಂಡಿಸುತ್ತಾ,ಈಗಾಗಲೇ ಕಳೆದ ಬಾರಿ ಸರಕಾರ ಮತ್ತು ಜಿಲ್ಲಾಡಳಿತ ಕಾನೂನು ಬದ್ಧವಾಗಿ ತಡಿಬಿಡಿ ಜಿಲ್ಲಾ ಪಂಚಾಯತಿ ಕ್ಷೇತ್ರ ಎಂದು ಘೋಷಣೆ ಮಾಡಲಾಗಿತ್ತು.

ಮತ್ತೆ ಕ್ಷೇತ್ರ ಪುನರ್ವಿಂಗಡಣೆ ಎನ್ನುವ ಸರಕಾರದ ಆದೇಶವನ್ನು ಇಟ್ಟುಕೊಂಡು ಏಕಾಏಕಿ ಯಾವುದೇ ಸರ್ವೇ ಕಾರ್ಯ ಮಾಡದೇ ಕುರಕುಂದಿಯನ್ನು ಜಿಲ್ಲಾ ಪಂಚಾಯತ ಕ್ಷೇತ್ರ ಮಾಡಿರುವುದು ಖಂಡನೀಯ. ಸರಕಾರ ಮತ್ತು ಅಧಿಕಾರಿಗಳು ಹಾಗೂ ಕೆಲವು ರಾಜಕಾರಣಿಗಳು ತಮ್ಮ ಮನಸ್ಸಿಗೆ ಬಂದಂತೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಪುನ: ಜಿಲ್ಲಾ ಪಂಚಾಯತಿಯನ್ನಾಗಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದರು.

About The Author