ದರ್ಶನಾಪುರ ಬಳಗದಿಂದ ಪತ್ರಿಕಾಗೋಷ್ಠಿ : ಪ್ರಜಾಸೌಧ ನಿರ್ಮಾಣಕ್ಕೆ ಅನವಶ್ಯಕ ಗೊಂದಲ ಬೇಡ

ಶಹಾಪುರ,

ಅಭಿವೃದ್ಧಿಯ ದೃಷ್ಟಿಯಿಂದ ಕಾಲೇಜ ಶಿಕ್ಷಣ ಸ್ಥಳದಲ್ಲಿಯೇ ಪ್ರಜಾಸೌಧ ಕಟ್ಟಡ ಕಟ್ಟುವುದು ಒಳಿತು. ರೈತ ಸಂಘಟನೆಗಳನ್ನು ಒಳಗೊಂಡು ಕೆಲವು ಸಂಘಟನೆಗಳು ಕಾಲೇಜು ಶಿಕ್ಷಣ ಸ್ಥಳದಲ್ಲಿ ಪ್ರಜಾಸೌಧ ಕಟ್ಟಡಕ್ಕೆ ವಿರೋಧಿಸಿ ಧರಣಿ ಕುಳಿತಿರುವುದು ಅಭಿವೃದ್ಧಿಗೆ ಪೂರಕವಲ್ಲ ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಲ್ಲಿಕಾರ್ಜುನ ಪೂಜಾರಿ ಹಾಗೂ ಕಾಂಗ್ರೇಸ್ ಮುಖಂಡರಾದ ಶ್ರೀಶೈಲ್ ಹೊಸಮನಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ದರ್ಶನಪುರ ಅಭಿಮಾನಿ ಬಳಗದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು.

ಸಚಿವರಾದ ಶರಣಬಸಪ್ಪಗೌಡ ದರ್ಶನಪುರವರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.ಪೂರ್ವಾಲೋಚನೆಯಿಂದ ಕಾಲೇಜು ಶಿಕ್ಷಣ ಸ್ಥಳದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲಾಗುತ್ತಿದೆ. ಕಾಲೇಜು ಸ್ಥಳವನ್ನು ಈಗಾಗಲೇ ಕಂದಾಯ ಇಲಾಖೆಯ ಸುಪರ್ದಿಗೆ ವಯಿಸಿದ್ದು ಕಟ್ಟಡ ನಿರ್ಮಾಣಕ್ಕೆ ಅನುಮತಿ ದೊರಕಿದೆ ಕಟ್ಟಡ ನಿರ್ಮಾಣ ಕೆಲಸಕ್ಕೆ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿಯೇ ಪ್ರತಿಭಟನೆ ನಡೆಸುತ್ತಿರುವುದು ಒಳಿತಲ್ಲ. ಇದು ಅಭಿವೃದ್ಧಿ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿದಂತೆ ಎಂದರು.

ಕಲ್ಯಾಣ ಕರ್ನಾಟಕವನ್ನು ಹೋಲಿಸಿದಾಗ ಶಹಪೂರ ಕ್ಷೇತ್ರ ಅಭಿವೃದ್ಧಿಯಲ್ಲಿ ಮುಂದಿದೆ. ಸಣ್ಣಪುಟ್ಟ ಸಮುದಾಯಗಳನ್ನು ಒಳಗೊಂಡು ಎಲ್ಲಾ ಸಮುದಾಯದವರಿಗೆ ಸಮುದಾಯ ಭವನಗಳಿಗೆ ಅನುದಾನವನ್ನು ನೀಡಲಾಗಿದೆ. ಶಾಶ್ವತ ಕುಡಿಯುವ ನೀ,ರು ಆಸ್ಪತ್ರೆಗಳ ಮೇಲ್ದರ್ಜೆ, ಗ್ರಾಮೀಣ ಪ್ರದೇಶದ ಆಸ್ಪತ್ರೆಗಳ ಮೇಲ್ದರ್ಜೆ, ಶಾಲಾ ಕೊಠಡಿ ನಿರ್ಮಾಣ,ತಾಯಿ ಮಕ್ಕಳ ಆಸ್ಪತ್ರೆ, ಒಳಚರಂಡಿ ನಿರ್ಮಾಣ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಸಚಿವರು ಮಾಡುತ್ತಿದ್ದು ಇದಕ್ಕೆ ನಾವೆಲ್ಲರೂ ಬೆಂಬಲ ವ್ಯಕ್ತಪಡಿಸಬೇಕಿದೆ ಎಂದರು. ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದರೆ ಪ್ರಜಾಸೌಧದ ಸುತ್ತ ಎತ್ತರವಾಗಿ ಕಾಂಪೌಂಡ್ ನಿರ್ಮಿಸಬೇಕು. ಅಭಿವೃದ್ಧಿ ಕೆಲಸಗಳಿಗೆ ನಾವು ಬೆಂಬಲಿಸಬೇಕೆ ಹೊರತು ವಿರೋಧ ವ್ಯಕ್ತಪಡಿಸಬಾರದು. ಪ್ರತಿಭಟನಾ ನಿರತರ ಜೊತೆ ಸಚಿವರು ಮಾತನಾಡಿ ಸಮಸ್ಯೆಯನ್ನು ತಿಳಿಗೊಳಿಸಬೇಕು ಎಂದು ಹೇಳಿದರು. ಹಳೆ ತಹಶೀಲ್ ಸ್ಥಳದಲ್ಲಿ ಈಗಾಗಲೇ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕಾಗಿ ಸ್ಥಳ ನಿಗದಿಪಡಿಸಲಾಗಿದೆ. ಎಂದರು.

ಕಾಂಗ್ರೆಸ್ ಮುಖಂಡ ಶಿವಕುಮಾರ ತಳವಾರ ಮಾತನಾಡಿ,ಸಚಿವರ ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸಮುದಾಯಗಳನ್ನು ಪರಿಗಣಿಸಿ ಎಲ್ಲರ ಅಭಿಪ್ರಾಯ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಿರುವ ಸಚಿವರು ಮುಂದಾಲೋಚನೆಗಳನ್ನು ಮನದಟ್ಟು ಮಾಡಿಕೊಳ್ಳದೆ ಅಭಿವೃದ್ಧಿ ಕೆಲಸವನ್ನು ವಿರೋಧಿಸುವುದು ಸರಿಯಲ್ಲ. ತಾಲೂಕಿನಲ್ಲಿ ಹಲವಾರು ಕಟ್ಟಡಗಳು ಬಾಡಿಗೆಯಲ್ಲಿ ನಡೆಯುತ್ತಿವೆ.ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಇದನ್ನು ಪರಿಗಣಿಸಿ ಎಲ್ಲಾ ಕಚೇರಿಗಳನ್ನು ಒಂದೇ ಸೂರಿನಲ್ಲಿ ನಿರ್ಮಿಸಲು ಪ್ರಜಾಸೌಧ ಕಟ್ಟಡವನ್ನು ಕಟ್ಟಲು ಸಚಿವರು ಮುಂದಾಗಿದ್ದಾರೆ.ಇದನ್ನು ನಾವು ಸ್ವಾಗತಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ದರ್ಶನಾಪುರ್ ಅಭಿಮಾನಿ ಬಳಗದ ಹೊನ್ನಪ್ಪ ರಕ್ತಪೂರ್, ಕಾಳಪ್ಪ ಕುಳಗೇರಿ, ಸುಭಾಷ್ ತಳವಾರ್, ಜಯರೆಡ್ಡಿ ಹೊಸ್ಮನಿ, ಹೊನ್ನಪ್ಪ ಗಂಗನಾಳ. ರಾಜಾ ಪಟೇಲ್ ಬೂದನೂರು,ಭೀಮರಾಯ ಮಾಸ್ಟರ್ ಬೂದನೂರ್,ನಿಂಗಪ್ಪ ದೊಡ್ಮನಿ ಗೋಗಿ,ಶರಣಪ್ಪ ಅನವಾರ,ಶರಣಪ್ಪ ಭೂತಾಳಿ, ಮರೆಪ್ಪ ಸಲಾದಪೂರ, ಮರೆಪ್ಪ ಮುಂಡಾಸ್, ಇನ್ನಿತರರು, ಭಾಗವಹಿಸಿದ್ದರು.

 

“ಈ ಸಂದರ್ಭದಲ್ಲಿ ಪತ್ರಿಕಾ ಭವನದ ಪರ ಮಾತನಾಡಿದ ಅಭಿಮಾನಿ ಬಳಗದವರೆಲ್ಲರೂ ಒಕ್ಕೋರಿಲಿನಿಂದ ಸಚಿವರ ಜೊತೆ ಚರ್ಚಿಸಿ ಪತ್ರಿಕಾ ಭವನಕ್ಕೆ ನಿವೇಶನ ಮತ್ತು ಕಟ್ಟಡನಿರ್ಮಿಸಿಕೊಡಲು ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು” 
*****************
ನಗರದ ಹೊರವಲಯದ ಕನ್ನೆ ಕೋಳೂರು ರಸ್ತೆಯಲ್ಲಿರುವ ವಿವಿಧ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿನಿಯರು ದಿನಾಲು ಐದಾರು ಕಿ.ಮೀ. ನಗರಕ್ಕೆ ನಡೆದುಕೊಂಡು ಬಂದು ವಿದ್ಯಾಭ್ಯಾಸ ಮಾಡುವುದು ತುಂಬಾ ತೊಂದರೆಯಾಗುತ್ತದೆ.ಅದಕ್ಕಾಗಿ ಸಿಟಿ ಬಸ್ ಬಿಡಿಸುವಂತೆ ಸಚಿವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.