ಮುಕ್ಕಣ್ಣ ಕರಿಗಾರರ 56 ನೇ ಜನ್ಮದಿನಾಚರಣೆ | 56 ನೇ ಕೃತಿ | ಸಂವಿಧಾನದ ಮೌಲ್ಯಗಳಿಗೆ ಜೀವತುಂಬಿದ ಬಸವಭೂಷಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೃತಿ ಲೋಕಾರ್ಪಣೆ

ರಾಯಚೂರು : ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿರುವ ಮುಕ್ಕಣ್ಣ ಕರಿಗಾರ ಅವರ ” ಸಂವಿಧಾನದ ಮೌಲ್ಯಗಳಿಗೆ ಜೀವತುಂಬಿದ ಬಸವಭೂಷಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರು “ಕೃತಿ ಲೋಕಾರ್ಪಣೆ ನಡೆಯಿತು.ಬಳ್ಳಾರಿ ಮುತ್ಯಾ ಎಂದೇ ಪ್ರಸಿದ್ಧರಾಗಿರುವ ಸಿರವಾರ ತಾಲೂಕಿನ ಗಾಯತ್ರಿಚೇತನ ಶಿವಯ್ಯಸ್ವಾಮಿಯವರು ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ ಕೃತಿ ಲೋಕಾರ್ಪಣೆ ಮಾಡಿದರು.ಗೌರಿಹುಣ್ಣಿಮೆಯ ಈ ದಿನವು ಮುಕ್ಕಣ್ಣ ಕರಿಗಾರರ 56 ನೆಯ ಹುಟ್ಟು ಹಬ್ಬ; ಸಿದ್ಧರಾಮಯ್ಯನವರ ಕುರಿತ ಈ ಪುಸ್ತಕ ಮುಕ್ಕಣ್ಣ ಕರಿಗಾರರ 56 ನೆಯ ಪುಸ್ತಕ ಎನ್ನುವುದು ವಿಶೇಷ.

 

 

 

 

    ಗಬ್ಬೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ತಿರುಮಲರೆಡ್ಡಿ, ಹೇಮನಾಳ ಗ್ರಾಮ ಪಂಚಾಯತಿಯ ಪಿಡಿಒ ಲಕ್ಷ್ಮೀರೆಡ್ಡಿ ಮತ್ತು ಎರಡು ಗ್ರಾಮ ಪಂಚಾಯತಿಗಳ ಸಿಬ್ಬಂದಿಯವರು ಮುಕ್ಕಣ್ಣ ಕರಿಗಾರರ ಹುಟ್ಟುಹಬ್ಬ ಹಾಗೂ ಕೃತಿಬಿಡುಗಡೆಯ ಅಂಗವಾಗಿ ಸನ್ಮಾನಿಸಿ ಕೇಕ್ ಕತ್ತರಿಸಿ,ಸಂಭ್ರಮಿಸಿದರು ಹಾಗೂ ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೇಗಾರ,ಮಠದ ಶಿಷ್ಯ ಮೈನುದ್ದೀನ್ ಮಂದಕಲ್ ಅವರು ಪುಷ್ಪಗುಚ್ಚ ನೀಡಿ ಸನ್ಮಾನಿಸಿದರು.ಕೃತಿ ಲೋಕಾರ್ಪಣೆಯ ಸಂದರ್ಭದಲ್ಲಿ ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ಅರ್ಚಕ ದೇವರಾಜ ಕರಿಗಾರ, ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶರಣಗೌಡ ಮಾಲಿಪಾಟೀಲ್ ಹೊನ್ನಟಗಿ, ಬಸವರಾಜ ಶಿಣ್ಣೂರು,ಬಸವರಾಜ ಬ್ಯಾಗವಾಟ್,ರಮೇಶ ಖಾನಾಪುರ,ಏಳುಬಾವೆಪ್ಪ ಗೌಡ,ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ್, ಶ್ರೀಮತಿ ರಾಜಮ್ಮ ಮದನಲಾಲ್ ಮೈದಾರಕರ್,ರಂಗನಾಥ ಮಸೀದಪುರ,ಶಿಕ್ಷಕ ಬಸವಲಿಂಗ ಕರಿಗಾರ,ಶಿವಾನಂದ, ವೆಂಕಟೇಶ,ಶ್ರೀಶೈಲ ಕರಿಗಾರ,ವಿರುಪಾಕ್ಷಿ ಗುತ್ತೆದಾರ,ರಾಮಕೃಷ್ಣ ಯಾದವ್, ಬೂದಿಬಸವ ಕರಿಗಾರ,ಮಾಣಿಕರೆಡ್ಡಿ ಬಸವಕಲ್ಯಾಣ, ಮಲ್ಲಿಕಾರ್ಜುನ ಬಂಟಗುಟಿ, ಮೈನುದ್ದೀನ್ ಮಲದಕಲ್ ,ಶಿವ ಕುಮಾರವಸ್ತಾರ ,ಯುವಕವಿ ಮೋಹನಕುಮಾರ ಸಿಂಗ್ರಿ,ಯಲ್ಲಪ್ಪ ಕರಿಗಾರ,ಶಿವು ಮಸೀದಪುರ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.