ಖಾಸಗಿ ಶಾಲೆಗಳಿಗಿಲ್ಲ ರಜೆ : ಕ್ರಮ ಕೈಗೊಳ್ಳದ ಅಧಿಕಾರಿಗಳು ಪ್ರದೀಪ್ ಅಣಬಿ ಆರೋಪ

ಶಹಾಪುರ : ತಾಲೂಕಿನಾದ್ಯಂತ ದಸರಾ ರಜೆ ಸರ್ಕಾರ ಘೋಷಣೆ ಮಾಡಿದೆ.ಆದರೆ ಖಾಸಗಿ ಶಾಲೆಗಳು ಸರಕಾರದ ಆದೇಶಕ್ಕೆ ಕಿಮ್ಮತ್ತು ನೀಡದೆ ದಸರಾ ರಜೆಯಲ್ಲಿಯೂ ಕೂಡ ಶಾಲೆಗಳು ಆರಂಭವಿರುವುದು ಸರ್ಕಾರದ ಆದೇಶ ಉಲ್ಲಂಘಿಸಿದಂತಾಗುತ್ತದೆ. ಸರ್ಕಾರದ ಆದೇಶಕ್ಕೆ ಯಾವುದೇ ಕಿಮ್ಮತ್ತು ನೀಡದ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಂಡು ಪ್ರತಿ ಖಾಸಗಿ ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕೆಂದು ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ  ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಸರಕಾರ ಸೆ. 20 ರಿಂದ ಅ. 7ರವರೆಗೆ ಎಲ್ಲಾ ಶಾಲೆಗಳಿಗೆ ದಸರಾ ರಜೆ ಘೋಷಿಸಿ ಆದೇಶಿಸಿದೆ. ಕುಟುಂಬ ಸಮೇತ ಶಾಲಾ ಮಕ್ಕಳು ದಸರಾ ರಜೆ ಅನುಭವಿಸಲು ಬಿಡದ ಖಾಸಗಿ ಶಾಲೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳದೇ ಇರುವುದಕ್ಕೆ ಕಾರಣವೇನು ಎನ್ನುವುದು ತಿಳಿಯದಾಗಿದೆ.ಸರ್ಕಾರ ಆದೇಶಕ್ಕೆ ಕಿಮ್ಮತ್ತು ನೀಡದ ಖಾಸಗಿ ಶಾಲೆಗಳ ವಿರುದ್ಧ  ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.