ನಕಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ಶಹಾಪುರ:ತಾಲೂಕಿನಾದ್ಯಂತ ನಕಲಿ ಮದ್ಯ ಮಾರಾಟವು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ಅಂಗಡಿಗಳು, ಪಾನ್ ಶಾಪ್ ಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ತಹಶೀಲ್ದಾರರಿಗೆ ಮನವಿ ಮಾಡಲಾಯಿತು.

ತಾಲೂಕಿನ ವೈನ್ ಶಾಪ್ ಗಳಲ್ಲಿ ನಕಲಿ ಮದ್ಯವು ಅಕ್ರಮವಾಗಿ ನಡೆಯುತ್ತಿದ್ದು, ನಕಲಿ ಮದ್ಯ ಕುಡಿಯುವುದರಿಂದ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಕಲಿ ಮದ್ಯ ಮಾರಾಟದಿಂದ ಶಹಾಪೂರ ತಾಲೂಕಿಗೆ ಕೆಟ್ಟ ಹೆಸರು ಬಂದಿದ್ದು, ಈ ಸುದ್ದಿ ರಾಜ್ಯಾದ್ಯಂತ ಪ್ರಚಾರವಾಗಿದೆ. ತಾಲೂಕಿನಲ್ಲಿರುವ ನಕಲಿ ಮದ್ಯ ಮಾರಾಟ ಕೇಂದ್ರಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ನಕಲಿ ಮದ್ಯ ಮಾರಾಟದಲ್ಲಿ ಶಾಮೀಲಾಗಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು.ಒಂದು ವಾರದೊಳಗೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ ಕೇಂದ್ರಗಳ ಮುಂದೆ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಪ್ಪುಪಟ್ಟಿ ಪ್ರದರ್ಶಿಸಲಾಗುವುದು ಎಂದು ಒಕ್ಕೂಟದ ವತಿಯಿಂದ ಕನ್ನಡ ಪರ ಒಕ್ಕೂಟದ ಅಧ್ಯಕ್ಷರಾದ ಮಲ್ಲಯ್ಯ ಸ್ವಾಮಿ ಎಚ್ಚರಿಸಿದರು.

 

ಭೀಮಣ್ಣ ಶಾಖಾಪೂರ್, ವೆಂಕಟೇಶ್ವರ ಬೋನೆರ, ಸುಭಾಷ್ ಹೋತಪೇಟ, ಮೌನೇಶ ಹಳಿಸಗರ, ಮಾಳಪ್ಪ ಪೂಜಾರಿ, ಮಲ್ಲನಗೌಡ ರಾಯಚೂರು, ಮಲ್ಲಾರೆಡ್ಡಿ ಸೇರಿದಂತೆ ಇತರರು ಇದ್ದರು.

About The Author