ವಡಗೇರಾ : ವಿವಿಧೆಡೆ 76ನೇ ಗಣರಾಜ್ಯೋತ್ಸವ ದಿನಾಚರಣೆ

ವಡಗೇರಾ : ತಾಲೂಕಿನ ವಿವಿಧೆಡೆ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ್ ಮಹಾತ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.  ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಡಾ.ಬಿಆರ್ ಅಂಬೇಡ್ಕರ್ ಮಹಾನ್ ನಾಯಕರ ಹೋರಾಟ ಸ್ಮರಿಸುತ್ತ ಸಂವಿಧಾನ ಜಾರಿಗೆ ಬಂದ ಈ ದಿನವನ್ನು ನಾವೆಲ್ಲರೂ ಗಣರಾಜ್ಯ ದಿನವನ್ನಾಗಿ ಆಚರಿಸುತ್ತೇವೆ ಎಂದು ಹೇಳಿದರು. ಯೋಜನಾಧಿಕಾರಿ ರಾಘವೇಂದ್ರ ಕುಲಕರ್ಣಿ, ಟಿ ಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ,ಟಿಎಇ ಭಾಸ್ಕರ್, ಬಿಎಫ್ಟಿ ಮತ್ತು ತಾಲೂಕು ಪಂಚಾಯಿತಿ ಸಿಬ್ಬಂದಿಯವರು ಉಪಸ್ಥಿತರಿದ್ದರು.
ತಾಲೂಕಿನ ತಹಶೀಲದ್ದಾರ್ ಕಚೇರಿಯಲ್ಲಿ ತಹಶೀಲ್ದಾರರಾದ ಶ್ರೀನಿವಾಸ ಚಾಪಲ್ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣಗೈದರು.ಸಂವಿಧಾನ ಜಾರಿಗೆ ಬಂದ ದಿನವಾದ ಇಂದು ದೇಶದ ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಸಂವಿಧಾನವು ಪವಿತ್ರ ಗ್ರಂಥವಾಗಿದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಣ್ಣ ತಮ್ಮಣ್ಣೋರು ಉಪತಸಿಲ್ದಾರರಾದ ಸಂಗಮೇಶ ದೇಸಾಯಿ, ರಾಮುಲು ನಾಯಕ್ ರಾಮನಗೌಡ ಸಂಜುಕುಮಾರ ತಿಪ್ಪೇಸ್ವಾಮಿ ಮುಖಂಡರಾದ ಸಿದ್ದನಗೌಡ ಕಾಡಮನೋರ,ಡಾ. ಸುಭಾಷ ಕರಣಿಗಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.