ಅಂದು ಐದು ವರ್ಷ ಒಳ್ಳೆಯ ಆಡಳಿತ ನಡೆಸಿದ ಸಿದ್ದರಾಮಯ್ಯ ಇಂದು ಹಳಿತಪ್ಪಿದ್ದು ಎಲ್ಲಿ ?, ಅಂದಿನ ಒಳ್ಳೆಯ ಆಡಳಿತಕ್ಕೆ ಕಾರಣಿಕರ್ತರು ಯಾರು ?

ಬಸವರಾಜ ಕರೇಗಾರ

ಕವಿಡೆಸ್ಕ್ : ಸಿದ್ದರಾಮಯ್ಯ ಕಳಂಕ ರಹಿತ ನಾಯಕ. 2013 ರಿಂದ 2018 ರವರೆಗೆ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಿದ ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಒಳ್ಳೆಯ ಆಡಳಿತ ನೀಡಿದ್ದರು. ವಿರೋಧ ಪಕ್ಷದವರು ವಿರೋಧ ಮಾಡದಂತೆ ಆಡಳಿತ ನಡೆಸಿದ್ದರು.ಅದಕ್ಕೆ ಕಾರಣಿಕರ್ತರಾಗಿದ್ದವರು ನಿವೃತ್ತ ಐಎಎಸ್ ಅಧಿಕಾರಿ ವಿ ಶಂಕರ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯನವರು. ಯುಕ್ತಿ ಎಂದರೆ ಐಎಎಸ್ ವಿ ಶಂಕರ್, ಶಕ್ತಿ ಎಂದರೆ ಐಪಿಎಸ್ ಕೆಂಪಯ್ಯ ಎಂದು ಅಷ್ಟೊಂದು ಜನಪ್ರಿಯತೆ ಪಡೆದಿದ್ದರು. ಈ ಇಬ್ಬರು ಅಧಿಕಾರಿಗಳಿಂದ 5 ವರ್ಷಗಳ ಕಾಲ ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ನಡೆಸಿದರು. ಇವರಿಂದಲೇ ಸಿದ್ದರಾಮಯ್ಯನವರಿಗೆ ಐದು ವರ್ಷಗಳ ಕಾಲ ಒಳ್ಳೆಯ ಆಡಳಿತ ನಡೆಸಿದ ವ್ಯಕ್ತಿ ಎನ್ನುವ ಬಿರುದು ಬಂದಿತು ಎನ್ನಬಹುದು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆ ನಿವೃತ್ತ ಐಎಎಸ್ ಅಧಿಕಾರಿ ವಿ. ಶಂಕರ್

ಗೃಹ ಸಚಿವರ ಸಲಹೆಗಾರರಾಗಿ ಐಪಿಎಸ್ ಕೆಂಪಯ್ಯನವರು ಗೃಹಸಚಿವರ ಎಲ್ಲಾ ಕೆಲಸವನ್ನು ಮಾಡುತ್ತಾ ರಾಜ್ಯದಲ್ಲಿ ಯಾವುದೇ ಕೋಮುಗಲಭೆಯಾಗದಂತೆ ಆಯಾ ಕಟ್ಟಿನ ಸ್ಥಳದಲ್ಲಿ ಒಳ್ಳೆಯ ಅಧಿಕಾರಿಗಳನ್ನು ನೇಮಿಸಿ ಸುಗಮವಾಗಿ ಆಡಳಿತ ನಡೆಸುವಂತೆ ಗೃಹ ಸಚಿವರಿಗೆ ಮನವರಿಕೆ ಮಾಡುತ್ತಿದ್ದರು.

ಅದೇ ರೀತಿಯಾಗಿ ವಿ ಶಂಕರ್ ರವರು ಜಿಲ್ಲಾಧಿಕಾರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆನ್ನಿಗೆ ನಿಂತು ಎಲ್ಲಾ ಆಡಳಿತದ ಇಲಾಖೆಗಳಲ್ಲಿ ಒಳ್ಳೆಯ ಆಡಳಿತ ನಡೆಸಿಕೊಡಲು ಕಾರಣಕರ್ತರಾದರು.

ಎರಡು ಬಾರಿ ಮೈಸೂರಿನ ಮೂಡಾದ ಕಮಿಷನರ್ ಆಗಿ ವಿ ಶಂಕರ್ ರವರು ಸೇವೆ ಸಲ್ಲಿಸಿದ್ದರು. ಹಲವು ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2013ರಲ್ಲಿ ಬೆಂಗಳೂರು ಗ್ರಾಮೀಣ ಜಿಲ್ಲಾಧಿಕಾರಿಯಾಗಿ ಬಡವರಿಗೆ ರೈತರಿಗೆ ದೂರದ ಊರಿನಿಂದ ಬರುವ ಜನರಿಗೆ ಅನುಕೂಲವಾಗಲಿ ಎಂದು ಜಿಲ್ಲಾಡಳಿತವನ್ನೇ ದೇವನಹಳ್ಳಿಗೆ ವರ್ಗಾವಣೆ ಮಾಡಿ ಅನುಕೂಲ ಮಾಡಿಕೊಟ್ಟಿದ್ದರು.

ವಿ ಶಂಕರ್ ನಿವೃತ್ತಿ ಐಎಎಸ್ ಅಧಿಕಾರಿ 

2006ರಲ್ಲಿ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವ ಸಂದರ್ಭದಲ್ಲಿ ವಿ ಶಂಕರ್ ರವರ ಆಡಳಿತ ಮೆಚ್ಚಿ ಬೆಂಗಳೂರಿನಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿರುವುದನ್ನು ವಿ ಶಂಕರ್ ಅವರ ಹೆಗಲಿಗೆ ಹಾಕಿದರು. ಇದರಿಂದ ಏಟಿ ರಾಮಸ್ವಾಮಿ ಸದನ ಸಮಿತಿ ರಚಿಸಲಾಯಿತು. ಸುಮಾರು 11 ಸಾವಿರ ಎಕರೆ ಭೂಮಿಯು ಒತ್ತುವರಿಯಾಗಿರುವುದನ್ನು ಸದನ ಸಮಿತಿಯು ಮುಖ್ಯಮಂತ್ರಿ ಕುಮಾರಸ್ವಾಮಿಗೆ ವರದಿ ನೀಡಿತು.ಆದರೆ ರಾಜಕೀಯ ನಾಯಕರ ಪ್ರಭಾವದಿಂದಲೋ ಎನೊ ಅದು ಧೂಳು ಹಿಡಿಯುವಂತಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿವೃತ್ತ ಐಎಎಸ್ ಅಧಿಕಾರಿ ವಿ. ಶಂಕರ್ ಅವರ ಆಡಳಿತದ ಬಗ್ಗೆ ಟ್ವಿಟರ್ ನಲ್ಲಿ ಅಭಿನಂದನೆ ಸಲ್ಲಿಸಿ ಟ್ವಿಟ್ ಮಾಡಿದ್ದು.

2013ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು. ಹೆಚ್ ಎಸ್ ದೊರೆಸ್ವಾಮಿ ಸ್ವಾತಂತ್ರ ಹೋರಾಟಗಾರರು ಬೆಂಗಳೂರಿನ ಭೂ ಒತ್ತುವರಿ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಿದರು. ಇಂತಹ ಸಂದರ್ಭದಲ್ಲಿ ಖಡಕ್ ಜಿಲ್ಲಾಧಿಕಾರಿಯಾಗಿ ಕಂಡಿದ್ದು ವಿ ಶಂಕರ್. ಸಿದ್ದರಾಮಯ್ಯನವರು ಬೆಂಗಳೂರು ನಗರಕ್ಕೆ 2014ರಲ್ಲಿ ವಿ ಶಂಕರ್ ಅವರನ್ನು ನೇಮಕ ಮಾಡಲಾಯಿತು. ಎಟಿ ರಾಮಸ್ವಾಮಿಯವರ ವರದಿಯನ್ನು ವಿ ಶಂಕರ ರವರು ಕೈಗೆತ್ತಿಕೊಂಡು 11,000 ಎಕರೆ ಜೊತೆಗೆ ಒಟ್ಟು 18860 ಎಕರೆ ಸರ್ಕಾರಿ ಭೂ ಅಕ್ರಮವನ್ನು ಹೊರ ತೆಗೆದು ಸರಕಾರಕ್ಕೆ ಒಪ್ಪಿಸಿದರು. ಇದರಿಂದ ಕೆಲವು ಮಾಧ್ಯಮಗಳು ವಿ ಶಂಕರ್ ಅವರನ್ನು ಡೆಮೊಲಿಷ್ ಜಿಲ್ಲಾಧಿಕಾರಿಗಳು ಎಂದು ಬಿರುದು ನೀಡಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಐಎಎಸ್ ಅಧಿಕಾರಿ ವಿ.ಶಂಕರ್

ವಿ.ಶಂಕರ್ ಅವರ ಆಡಳಿತ ವೈಖರಿಯನ್ನು ನೋಡಿ ಅಂದಿನ ಪ್ರಧಾನಿ ನರೇಂದ್ರ ಮೋದಿಯವರು ಶಂಕರ್ ರವರನ್ನು ಟ್ವಿಟ್ಟರ್ ಮೂಲಕ ಅಭಿನಂದಿಸಿದ್ದರು. ವಿಶೇಷವಾಗಿ ಪ್ರಧಾನ ಮಂತ್ರಿ ಪ್ರಶಸ್ತಿಗೆ ವಿ ಶಂಕರ್ ಅವರನ್ನು ಪ್ರಧಾನಿಯವರು ಆಯ್ಕೆ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತತೆಗೆ ದಕ್ಕೆ ಬರಬಾರದು ಎಂದು ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದರು. 2014ರಲ್ಲಿ ವಿಜಯ ಕರ್ನಾಟಕ ನೀಡುವ ವರ್ಷದ ವ್ಯಕ್ತಿ ಪ್ರಶಸ್ತಿಗೆ ವಿ ಶಂಕರ್ ಅವರು ಭಾಜನರಾಗಿದ್ದರು. ಸದಾ ಶೋಷಿತರ ಪರವಿದ್ದ ವಿ ಶಂಕರ್ ಒಂದು ಲಕ್ಷ ಬಡವರಿಗಾಗಿ ನಿವೇಶನ ಹಂಚಿದ್ದರು. ಬಡವರು ಮತ್ತು ಸಂಘ ಸಂಸ್ಥೆಗಳಿಗೆ ನಿವೇಶನ ಒದಗಿಸಿಕೊಟ್ಟಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಿಂದಾಲ್ ಪ್ರಕೃತಿ ಚಿಕಿತ್ಸಾ ಶಿಬಿರಕ್ಕೆ ಬಂದಿರುವ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಆರ್ ಶಂಕರ್ ಜೊತೆ ಭೇಟಿ ಮಾಡಿದ್ದು

ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಕೃತಿ ಚಿಕಿತ್ಸೆಗೆ ಆಗಮಿಸಿದ್ದರು.ವಿ ಶಂಕರ ಅವರ ಕಾರ್ಯ ವೈಖರಿಯನ್ನು ನೋಡಿ ನೀವು ನಿವೃತ್ತರಾದ ನಂತರ ಆಪ್ ಪಕ್ಷಕ್ಕೆ ಬರಬೇಕು ಎಂದು ಆಹ್ವಾನಿಸಿದ್ದರು.ಸಿದ್ದರಾಮಯ್ಯನವರ ಆಪ್ತತೆಗಾಗಿ ವಿ ಶಂಕರ್ ನಯವಾಗಿ ತಿರಸ್ಕರಿಸಿದರು.

ಐಪಿಎಸ್ ಕೆಂಪಯ್ಯ ನಿವೃತ್ತ ಪೊಲೀಸ್ ಕಮಿಷನರ್

ಚಲನಚಿತ್ರ ನಟ ದಿ. ಡಾ.ವಿಷ್ಣುವರ್ಧನ್ ರವರ 10 ಗುಂಟೆ ಜಮೀನು ಇಂದು ಉಳಿದಿದೆ ಎಂದರೆ ಅದು ವಿ ಶಂಕರ್ ಅವರ ಕೊಡುಗೆ ಎಂದು ಇಂದಿಗೂ ಚಲನಚಿತ್ರ ಮಂಡಳಿಯು ಹೇಳುತ್ತಿದೆ. ಅಭಿಮಾನ ಸ್ಟುಡಿಯೋವನ್ನು ವಿ ಶಂಕರ್ ಅವರು ಸರಕಾರದ ವಶಕ್ಕೆ ಪಡೆದರು. ಮೂರು ನೂರು ಎಕರೆ ಜಮೀನು ಅಭಿಮಾನ ಸ್ಟುಡಿಯೋದ್ದಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ.ರಾಜಕುಮಾರ ಅಧ್ಯಯನ ಪೀಠ ವಿಸ್ತಾರ ಕೇಂದ್ರಕ್ಕೆ ಎರಡು ಎಕರೆ ಜಮೀನು ಮಂಜೂರು ಮಾಡಿದ್ದರು. ಆ ಜಮೀನು ಯಲಹಂಕ ಹೋಬಳಿಯ ಬೆಳ್ಳುಳ್ಳಿ ಗ್ರಾಮದಲ್ಲಿದೆ.

ಇಂತಹ ಐಎಎಸ್ ಅಧಿಕಾರಿ ವಿ ಶಂಕರ್ ಮತ್ತು ಐಪಿಎಸ್ ಅಧಿಕಾರಿ ಕೆಂಪಯ್ಯ ರವರಿಂದ ಸಿದ್ದರಾಮಯ್ಯನವರಿಗೂ ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ 2013 ರಿಂದ2018 ರವರೆಗೆ ಐದು ವರ್ಷಗಳ ಕಾಲ ಸಮರ್ಥ ಆಡಳಿತ ನಡೆಸಿದ್ದರು.ವಿ ಶಂಕರ್ ಅವರು ಇಲಾಖಾವಾರು ಸಭೆಗಳನ್ನು ಕರೆಯುತ್ತಿದ್ದರು. ಆ ಸಭೆಗಳನ್ನು ಆಧಾರವಾಗಿಟ್ಟುಕೊಂಡು ಸಿದ್ದರಾಮಯ್ಯನವರು ಆಡಳಿತ ನಡೆಸುತ್ತಿದ್ದರು.

ಇಂದು ಮುಖ್ಯಮಂತ್ರಿ ಅವರು ಮೂಡಾದಲ್ಲಿ ಸಿಕ್ಕಿಕೊಂಡಿದ್ದಾರೆ. ಈ ಇಬ್ಬರು ಶಕ್ತಿ ಮತ್ತು ಯುಕ್ತಿ ಎರಡು ಕೇಂದ್ರಗಳು ಇಂದು ಸಿದ್ದರಾಮಯ್ಯನವರಲ್ಲಿದ್ದಿದ್ದರೇ ಆಡಳಿತದ ವೈಖರಿಯೆ ಬೇರೆ ಇರುತ್ತಿತ್ತು. ಮತ್ತೊಂದು ಐದು ವರ್ಷಗಳ ಕಾಲ ಒಳ್ಳೆಯ ಆಡಳಿತ ನಡೆಸುತ್ತಿದ್ದರು. ಇಂತಹ ಸಮರ್ಥ ವ್ಯಕ್ತಿಗಳನ್ನು ಸಿದ್ದರಾಮಯ್ಯನವರ ಬಳಿಗೆ ಸುಳಿಯದಂತೆ ನೋಡಿಕೊಳ್ಳುತ್ತಿರುವವರು ಯಾರು ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.