ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 29ನೇ ವಾರ್ಷಿಕೋತ್ಸವ ಸಮಾರಂಭ

ಶಹಾಪೂರ:ಶಹಾಪೂರ ಪಟ್ಟಣದ ಬೀಮ್ಮರಡ್ಡಿ ಬೈರಡ್ಡಿ ನಗರದಲ್ಲಿ(ಎನ್ ಜಿ ಓಕಾಲೋನಿ ) ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಕಛೇರಿಯಲ್ಲಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 29ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ವಿಶ್ವನಾಥರಡ್ಡಿ ದರ್ಶನಾಪೂರವರು ಕಾರ್ಯಕ್ರಮವನ್ನು ಸಹಕಾರ ಸಂಘದ ಪಿತಾಮಹ ಸಿದ್ದನಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಉದ್ಘಾಟಿಸಿದರು.

 

ಈ ಸಂಘವು 1995 ರಂದು ನೊಂದಣಿಯಾಗಿ ಇಲ್ಲಿಯವರೆಗೆ 629 ನೌಕರರ ಸದಸ್ಯರಾಗಿ ಹಲವಾರು ನೌಕರದಾರರಿಗೆ ನೀವೇಶನ ಹಂಚಿಕೆ ಮಾಡಿದ್ದು ನಮಗೆ ಸಂತೋಷವಾಗಿದೆ. ನೌಕರರಿಗೆ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ನೀವೇಶನ ಭೂಮಿ ಖರೀದಿ ಮಾಡಿ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದರು. ಸಂಘದ ಮೂಲ ಉದ್ದೇಶ ನೌಕರದಾರರಿಗೆ ವಿವಿಧ ರೀತಿಯಿಂದ ನಿವೇಶನ ನೀಡಿ ಮತ್ತು ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಸಂಘದ ಕರ್ತವ್ಯವಾಗಿರುತ್ತದೆ. ಈಗಾಗಲೇ ನೆಲಮಹಡಿ ಸಂಪೂರ್ಣ ಮುಕ್ತಾಯಗೊಂಡಿರುತ್ತದೆ ಮುಂದಿನ ಆರು ತಿಂಗಳ ಒಳಗಾಗಿ ಮೊದಲನೆಯ ಮಹಡಿಯನ್ನು ನೌಕರರ ಗೃಹ ನಿರ್ಮಾಣ ಕಛೇರಿಯನ್ನು ಉದ್ಘಾಟನಾ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ 2023 /2024 ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ವರದಿಯನ್ನು ಗೃಹ ನಿರ್ಮಾಣ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಡಾ ಶಂಕರಗೌಡ ಯಕ್ಷಂತಿ ಓದಿದರು. ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸಲಹೆಗಾರರಾದ ಎಂ ನಾರಾಯಣ ನಮ್ಮ ಸಂಘವು ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ಮೂಲಕ ಒಪ್ಪಿಗೆ ತೆಗದುಕೊಂಡು ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಉಪಾಧ್ಯಕ್ಷರಾದ ರೇಖು ಚವ್ಹಾಣ ನಿರ್ದೇಶಕರಾದ ಬೀಮ್ಮರಡ್ಡಿ ಬೈರಡ್ಡಿ ಶಂಕರಗೌಡ ಪೋಲಿಸ್ ಪಾಟೀಲ ಗುಂಡುಗುರ್ತಿ ಬಾಪುಗೌಡ ಅನ್ಪೂರ ರಾಮಗೊಂಡಪ್ಪ ಅರಳಗೊಂಡ ಶಿವರಾಜ ಹಾಲಗೇರಾ ಶಮಿನಾ ಶಾಹಿನ್ ಶೈಲಜಾ ಪತ್ತಾರ ದೇವೇಂದ್ರಪ್ಪ ತಡಿಬಿಡಿ ಬಸವರಾಜ ಸಿಂಗ್ರಿ ಅಮರಪ್ಪ ಸಗರ ಹೇಮರೆಡ್ಡಿ ಪಾಟೀಲ್ ಮತ್ತು ತಾಂತ್ರಿಕ ಸಲಹೆಗಾರ ರಾಜು ಸಾಹುಕಾರ್ ಇಂಜಿನಿಯರ್ ವಾರ್ಷಿಕ ಮಹಾಸಭೆಯಲ್ಲಿ ಅನೇಕ ಸದಸ್ಯರಾದ ಶಿವಶರಣ ಕನ್ನೂಳ್ಳಿ ಚಾಂದಪಾಶ ಶಾಂತಗೌಡ ಸಾಧ್ಯಾಪೂರ ಅಶೋಕ ಕೂಡ್ಲೂರ ಶಾಂತಗೌಡ ತುಂಬಿಗಿ ಬಸವರಾಜ ಯಾಳಗಿ ಚಂದಪ ಮಡ್ನಾಳ ನಾಗೆಂದ್ರ ಶಿರವಾಳ್ಕರ್ ಗುರಣ್ಣ ಮದರಿ ಎನ್ ಸಿ ಪಾಟೀಲ ಬಿಮ್ಮಣ್ಣಗೌಡ ತಳ್ಳೆವಾಡ ರಾಮೆಶೆಟ್ಟಿ ಸಿರನೂರು ಬಾಬುರಾವ್ ಅಂಕಲಗಿ ಹಣಮಂತ ಖಾನಾಪುರ ಸಂಗಣ್ಣಗೌಡ ಉಕ್ಕಿನಾಳ ಸಂಗಣ್ಣಗೌಡ ಪಾಟೀಲ ಅಮೀನರಡ್ಡಿ ಬಿದರಾಣಿ ಸುದಾಕರ ಕುಲ್ಕರ್ಣಿ ಮಹಾಂತಗೌಡ ಮಾಡಗಿ ರಾಮಚಂದ್ರ ಚವ್ಹಾಣ ರಾಜಕುಮಾರ ಸೇರಿದಂತೆ ಇತರರು ಇದ್ದರು.

About The Author