ಯಾದಗಿರಿ: ಎಲ್ಲರೊಂದಿಗೆ ಖುಷಿಯಿಂದಲೇ ಬೆರೆಯುತ್ತಿದ್ದ ಯುವ ಪತ್ರಕತ೯ ಶಾಂತಿನಾಥ ಒಣಕುದರಿ ಅವರ ಅಕಾಲಿಕ ಸಾವು ಜಿಲ್ಲೆಯ ಪತ್ರಕತ೯ರಿಗೆ ಬರಸಿಡಿಲು ಬಡಿದಂತಾಗಿದೆ ಎಂದು ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತ ಶಾಂತಿನಾಥ ಒಣಕುದರಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತರ ವಲಯದಲ್ಲಿ ಅಪಾರ ನೋವುಂಟು ಮಾಡಿದೆ. ಕಳೆದ 15 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಯುವ ಪತ್ರಕತ೯ನ ಸಾವು ಬಹಳ ಆಘಾತಕಾರಿ ಸಂಗತಿಯಾಗಿದೆ. ಬಹಳ ಕಷ್ಟಪಟ್ಟು ಕೆಲಸ ಮಾಡಿ ಪತ್ರಿಕೋದ್ಯಮದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು ಎಂದು ಹೇಳಿದರು.
ಪತ್ರಿಕೋದ್ಯಮದಲ್ಲಿ ಒಬ್ಬ ಪ್ರಾಮಾಣಿಕ ಯುವ ಪತ್ರಕತ೯ನನ್ನು ಜಿಲ್ಲೆ ಬಡವಾದಂತಾಗಿದೆ. ನಿಜಕ್ಕೂ ಇದು ಭಾರಿ ನೋವಿನ ಸಂಗತಿಯಾಗಿದೆ ಎಂದು ತಿಳಿಸಿದರು.
ಪತ್ರಿಕೋದ್ಯಮದ ಬಗ್ಗೆ ಬದ್ಧತೆಯನ್ನು ಹೊಂದಿದ್ದರು. ವೃತ್ತಿಯಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಂಡಿದ್ದರು. ಅವರ ಸ್ನೇಹಪರ ವ್ಯಕ್ತಿತ್ವ ಸದಾ ನಮ್ಮ ನೆನಪಿನಲ್ಲಿ ಜೀವಂತವಾಗಿರುತ್ತದೆ ಎಂದರು.
ಸ್ವಾಭಿಮಾನಿಯಾಗಿ ಕೆಲಸ ಮಾಡುತ್ತಿದ್ಜರು. ಇಂತಹವರ ಸಂಖ್ಯೆ ಅಪರೂಪ ಎನ್ನಬಹುದು. ನೈಜ ಪತ್ರತಕ೯ನ ಸಾವು ಎಂದಿಗೂ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.
ಪತ್ರಕತ೯ರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಕುಟುಂಬದೊಂದಿಗೆ ಸಮಯ ಕಳೆಯಲು ಸಹ ಆಗುವುದಿಲ್ಲ, ಹೀಗಾಗಿ ಸಮಾಜಕ್ಕೆ ಪತ್ರಕತ೯ರ ಕೊಡುಗೆ ಶ್ರೇಷ್ಠವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾಯ೯ಕಾರಿಣಿ ಸದಸ್ಯರಾದ ಹನುಮಂತ ಪಿ., ಗಣೇಶ್ ಪಾಟೀಲ್, ವಡಗೇರಾ ತಾಲ್ಲೂಕು ಅಧ್ಯಕ್ಷ ನಾಗಪ್ಪ ಕುಂಬಾರ, ಮಹೇಶ್ ಗಣೇರ್, ಸುದೀರ್ ಕೋಟಿ, ಆಂಜನೇಯ ದೇವರಮನಿ ಇದ್ದರು.