ಮುಕ್ಕಣ್ಣ ಕರಿಗಾರರ ವಿವಾಹದ ಹದಿನೆಂಟನೇ ವಾರ್ಷಿಕೋತ್ಸವದ ಸಂಭ್ರಮ

ಮುಕ್ಕಣ್ಣ ಕರಿಗಾರರ ವಿವಾಹದ ಹದಿನೆಂಟನೇ ವಾರ್ಷಿಕೋತ್ಸವದ ಸಂಭ್ರಮ

ಮುಕ್ಕಣ್ಣ ಕರಿಗಾರರು ಗೃಹಸ್ಥಾಶ್ರಮ ಸ್ವೀಕರಿಸಿ ಇಂದಿಗೆ ಹದಿನೇಳು ವರ್ಷಗಳು ಪೂರೈಸಿ,ಹದಿನೆಂಟು ವರ್ಷಗಳು ತುಂಬಿದವು.ಆ ಸವಿ ನೆನಪಿನಲ್ಲಿಂದು ಮಹಾಶೈವ ಧರ್ಮಪೀಠದಲ್ಲಿ ಪತ್ನಿ ಸಾಧನಾ ಮತ್ತು ಮಕ್ಕಳಾದ ವಿಂಧ್ಯಾ ಹಾಗೂ ನಿತ್ಯಾಳ ಜೊತೆ ಸರಳವಾಗಿ ವಿವಾಹವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.

ಮೊದಲಿಗೆ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರಿಗೆ ಪೂಜಿಸಿ,ನಮಿಸಿ ನಂತರ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ- ಕ್ಷೇತ್ರೇಶ್ವರಿಯರಾದ ಶ್ರೀ ವಿಶ್ವೇಶ್ವರ ಶಿವ ಶ್ರೀ ವಿಶ್ವೇಶ್ವರಿ ದುರ್ಗಾದೇವಿಯರನ್ನು ಪತ್ನಿ ,ಪುತ್ರಿಯರ ಸಹಿತ ಪೂಜಿಸಿ,ಶಿವ ದುರ್ಗಾ ದೇವಿಯರ ಆಶೀರ್ವಾದ ಪಡೆದರು.