ಕರ್ನಾಟಕ ಅಹಿಂದ ಜನ ಸಂಘದ ಕಲ್ಬುರ್ಗಿ ಜಿಲ್ಲಾ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ದೇವಕಿ ಶಿವಶರಣಪ್ಪ ಪೂಜಾರಿ ನೇಮಕ

ಬೆಂಗಳೂರು :- ಕರ್ನಾಟಕ ಅಹಿಂದ ಜನ ಸಂಘದ ಕಲ್ಬುರ್ಗಿ ಜಿಲ್ಲೆಯ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ದೇವಕಿ ಶಿವಶರಣಪ್ಪ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ರವರನ್ನು ನೇಮಕ ಮಾಡಲಾಗಿದೆ.ಅಹಿಂದ ಜನ ಸಂಘದ ಸಂಸ್ಥಾಪ ಕರು ಮತ್ತು ರಾಜ್ಯಧ್ಯಕ್ಷರಾಗಿರುವ ಅಯ್ಯಪ್ಪಗೌಡ ಅವರು ದೇವಕಿ ಶಿವಶರಣಪ್ಪ ಪೂಜಾರಿ ಅವರನ್ನು ನೇಮಕ ಮಾಡಿದರು.

ಅಹಿಂದ ಸಮುದಾಯದ ಜನರು ಸಾಮಾಜಿಕ ಶೈಕ್ಷಣಿಕ, ಆರ್ಥಿಕವಾಗಿ ಶ್ರೇಯೋಭಿವೃದ್ಧಿ ಹೊಂದಲು ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿ ಎಂದು ಹೇಳಿದ್ದಾರೆ.ತಮ್ಮ ನೇಮಕದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ದೇವಕಿ ಶಿವಶರಣಪ್ಪ ಪೂಜಾರಿ ಅವರು ಅಹಿಂದ ಸಮುದಾಯದ ಜನರ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *